ತೆರಿಗೆ ರಿಟರ್ನ್ಸ್ ಗೆ ದಿನಾಂಕ ವಿಸ್ತರಣೆ ಇಲ್ಲ :ನಕಲಿ ಸುದ್ದಿ ನಂಬಬೇಡಿ
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನಿಗದಿಗೊಳಿಸಿದ್ದ ಕೊನೆಯ ದಿನಾಂಕವನ್ನು ಹಣಕಾಸು ಇಲಾಖೆ ಮುಂದೂಡಿದೆ ಎಂಬ ನಕಲಿ ಸುದ್ದಿಗಳು ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಇದೆಲ್ಲವೂ ಸುಳ್ಳು, ಆಗಸ್ಟ್ 31 ರಂದೇ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ದಿನಾಂಕವನ್ನು ವಿಸ್ತರಿಸಿಲ್ಲ ಎಂದು ಸ್ವತಃ ಆದಾಯ ತೆರಿಗೆ ಇಲಾಖೆಯೇ ಸ್ಪಷ್ಟಪಡಿಸಿದೆ .
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸೆಪ್ಟೆಂಬರ್ 31 ರವರೆಗೆ ಅವಕಾಶ ಇದೆ ಎಂದು ಬರೆಯಲಾಗಿದ್ದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆದರೆ ಇದು ನಕಲಿ ಎಂದು ಇಲಾಖೆ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದೆ .
ಐಟಿ ರಿಟರ್ನ್ಸ್ ಫೈಲ್ ಮಾಡುವವರು ಆದಾಯ ತೆರಿಗೆ ವೆಬ್ ಸೈಟ್ ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು.https://www.incometaxindiaefiling.gov.in/hc ಇಲ್ಲಿಗೆ ಭೇಟಿ ನೀಡಿದ ನಂತರ ಅಲ್ಲಿ ಲೈಟ್ ಎಂಬ ಮತ್ತೊಂದು ಟ್ಯಾಬ್ ಒದಗಿಸಲಾಗಿದೆ. ಒಂದೊಂದಾಗಿ ಅಗತ್ಯ ಲಿಂಕ್ ಗಳು ತೆರೆದುಕೊಳ್ಳುತ್ತವೆ .