ಟೋಲಲ್ಲಿ ೩ ನಿಮಿಷಕ್ಕೂ ಹೆಚ್ಚು ಕಾದಿದ್ದೀರಾ…? ಹಾಗಾದರೆ ನೀವು ಹಣ ಕೊಡಬೇಡಿ.
ನಿಮಗೊಂದು ವಿಷಯ ಗೊತ್ತಾ.. ಟೋಲ್ ಪ್ಲಾಜಾ ಎದುರು 3 ನಿಮಿಷಕ್ಕಿಂತ ಹೆಚ್ಚು ಹೊತ್ತು ಸಾಲಿನಲ್ಲಿ ಕಾದಿದ್ದರೆ ನೀವು ಟೋಲ್ ಶುಲ್ಕ ಕಟ್ಟುವ ಅಗತ್ಯ ಇಲ್ಲ.
ದೀರ್ಘ ಪ್ರಯಾಣದ ನಡುವೆ ಗಂಟೆಗಟ್ಟಲೆ ಟೋಲ್ ಪ್ಲಾಜಾ ಎದುರು ಕಾಯುವುದು ಬೇಸರದ ವಿಷಯ. ಹಣ ಕೊಟ್ಟು, ಕಾಯುವುದು ರಗಳೆ. ಆದರೆ,
ಇನ್ನು ಮುಂದೆ ಹೆಚ್ಚು ಹೊತ್ತು ಕ್ಯೂ ನಿಂತರೂ ಬೇಜಾರು ಮಾಡಿ ಕೊಳ್ಳಬೇಕಿಲ್ಲ. ಏಕೆಂದರೆ ಇದರಿಂದ ನಿಮ್ಮ ಹಣ ಉಳಿತಾಯವಾಗಲಿದೆ!
ಹರಿ ಓ ಜಿಂದಾಲ್ ಎಂಬ ನ್ಯಾಯವಾದಿ ಮಾಹಿತಿ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿ ಈ ಮಾಹಿತಿ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಈ ವಿಷಯ ಖಚಿತಪಡಿಸಿದೆ.
ಟೋಲ್ ಗೇಟ್ಗಳಲ್ಲಿ ಯಾವುದೇ ರೀತಿಯ ವಾಹನಗಳು ಶುಲ್ಕ ಪಾವತಿಸಲು ಕಾಯುವಿಕೆ ಸುಮಾರು 3 ನಿಮಿಷಕ್ಕಿಂತ ಹೆಚ್ಚಾದರೆ ಆ ವಾಹನ ಸವಾರರು ಟೋಲ್ ಗೇಟ್ನಲ್ಲಿ ಶುಲ್ಕ ಪಾವತಿಸಬೇಕಿಲ್ಲ. ಈ ಬಗ್ಗೆ ಪಡೆದ ಮಾಹಿತಿಯನ್ನು ಹರಿ ಓಂ ಅವರು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಹಾಕಿದ್ದಾರೆ.
ವಾಹನ ಸವಾರರು ಅತೀ ಹೆಚ್ಚು ಕ್ಯೂ ಇರುವ ಸಂದರ್ಭದಲ್ಲಿ ತಾವು ಟೋಲ್ ಆವರಣ ಪ್ರವೇಶಿಸಿದ ತಕ್ಷಣ ವೀಡಿಯೋ ರೆಕಾರ್ಡಿಂಗ್ ಆರಂಭಿಸಿ ಮೂರು ನಿಮಿಷ ದಾಟಿದ ಬಳಿಕ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಅಧಿಕಾರಯುತವಾಗಿ ಚರ್ಚಿಸಿ ಯಾವುದೇ ಶುಲ್ಕ ಪಾವತಿಸದೆ ತೆರಳಬಹುದಾಗಿದೆ. ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ಆಗದೇ ಇರುವುದರಿಂದ 10 ರಿಂದ 15 ನಿಮಿಷಗಳ ತನಕ ವಾಹನ ಸವಾರರು ಕ್ಯೂನಲ್ಲಿ ನಿಂತರೂ ಮರುಮಾತನಾಡದೆ ಟೋಲ್ ಶುಲ್ಕ ಪಾವತಿಸಿ ಹೋಗುತ್ತಿದ್ದಾರೆ.
ಹಾಗಾಗಿ ಈ ವಿಷಯವನ್ನು ತಮ್ಮ ಸ್ನೇಹಿತರಲ್ಲಿ ಹಾಗೂ ಬಂಧು-ಮಿತ್ರರಲ್ಲಿ ತಪ್ಪದೇ ಶೇರ್ ಮಾಡಿ.