ಜಿಲ್ಲಾಧಿಕಾರಿ ಆದರೂ ಜನ ಸೇವಕ ಎಂಬುದು ನೆನಪಿರಲಿ
ನಿನ್ನೆಯಷ್ಟೇ ಜಿಲ್ಲಾಧಿಕಾರಿಯೊಬ್ಬ ಮದುವೆ ಮಂಟಪಕ್ಕೆ ನುಗ್ಗಿ “ಸಿನಿಮಾ ಹೀರೋ”ನಂತೆ ವರ್ತಿಸಿ ಹಿರಿಯರನ್ನು ಅಷ್ಟೇ ಅಲ್ಲದೆ ವಧು-ವರರನ್ನೂ ಕಲ್ಯಾಣ ಮಂಟಪದಿಂದ ಹೊರ ಕಳುಹಿಸಿದ ವಿಡಿಯೋವೊಂದು ವೈರಲ್ ಆಗಿತ್ತು. ಅಗರ್ತಲಾ ಜಿಲ್ಲಾಧಿಕಾರಿಯ ಈ ದರ್ಪ, ಅಮಾನವೀಯ ವರ್ತನೆ, ಮೈಮೇಲೆ ಪ್ರಜ್ಞೆ ಇಲ್ಲದಂತೆ ವರ್ತಿಸಿದ ರೀತಿ ರಾಜ್ಯ ಮಾತ್ರವಲ್ಲ ಇಡೀ ರಾಷ್ಟ್ರಾದ್ಯಂತ ಟೀಕೆಗೆ ಗುರಿಯಾಗಿತ್ತು
ಸರಿಸುಮಾರು ರಾತ್ರಿ 10 ಗಂಟೆಯ ವೇಳೆಗೆ ಇನ್ನೇನು ಅಂದಿನ ಕಾರ್ಯಕ್ರಮ ಮುಗಿಸಬೇಕು ಎಂಬ ತರಾತುರಿಯಲ್ಲಿ ಎಲ್ಲರೂ ಇದ್ದರು. ಆಗ ಅಲ್ಲಿಗೆ ಹಾಜರಾದ ಈ ಜಿಲ್ಲಾಧಿಕಾರಿ ಏಕಾಏಕಿ ಎಲ್ಲರನ್ನೂ ಹೊರದಬ್ಬಲು ಪೊಲೀಸರಿಗೆ ಆದೇಶಿಸಿದ. ಇದನ್ನು ಪ್ರಶ್ನಿಸಲು ಬಂದ ವಧುವಿನ ತಾಯಿ ತಾನು ಅನುಮತಿ ಪಡೆದ ಪತ್ರವನ್ನು ಜಿಲ್ಲಾಧಿಕಾರಿಗೆ ತೋರಿಸಿದಾಗ, ಅದನ್ನು ಏನು ಎಂದು ನೋಡದೆ ಹರಿದು ಆಕೆಯ ಮುಖದ ಮೇಲೆ ಎಸೆದ. ವಿಡಿಯೋದ ಈ ದೃಶ್ಯ ಆತ ಜಿಲ್ಲಾಧಿಕಾರಿ ಮಾತ್ರ ಅಲ್ಲ, ಯಾರೇ ಆಗಿದ್ದರೂ ಅಲ್ಲೇ ಸಿಗಿದು ಬಿಡೋಣ ಎನಿಸುತ್ತದೆ.
ಮತ್ತೊಂದು ದೃಶ್ಯದಲ್ಲಿ ವೃದ್ಧ ಕೈಗಾರಿಕೋದ್ಯಮಿಯೊಬ್ಬರಿಗೆ ತಲೆಯ ಮೇಲೆ ಹೊಡೆದು ತಳ್ಳಿದ ಘಟನೆ ಇದೆ. ಈತ ಯಾರೆಂಬುದು ಜಿಲ್ಲಾಧಿಕಾರಿಗೆ ತಿಳಿದಿಲ್ಲ. ತಿಳಿಯಲಾರದು ಕೂಡ. ಏಕೆಂದರೆ ಅಧಿಕಾರಿಗಳ ಕೈಗೆ ಆಳ್ವಿಕೆ ಕೊಟ್ಟು ಕುಳಿತಿರುವ ನಪಂಸಕ ಜನಪ್ರತಿನಿಧಿಗಳಿರುವಾಗ ಇದು ಸಹಜ ಕೂಡ.
ತಲೆಗೆ ಏಟು ತಿಂದ ಆ ಕೈಗಾರಿಕೋದ್ಯಮಿ ಸುಮ್ಮನೆ ಬಿಟ್ಟಾನೆಯೇ? ಇಂತಹ ಜಿಲ್ಲಾಧಿಕಾರಿ ಆಗಲು ಅರ್ಹರಿರುವ ನೂರಾರು ಜನರನ್ನು ಉದ್ಯೋಗಕ್ಕೆ ಇಟ್ಟುಕೊಂಡಿರುವಾತ ಅವನು. ನ್ಯಾಯಾಧೀಶರು ಅಲ್ಲಿಗೆ ಬರಬೇಕೆಂದು ಪಟ್ಟುಹಿಡಿದಾತ ಕಡೆಗೂ ಕರೆಯಿಸಿಯೇ ಬಿಟ್ಟ. ಈಗ ಜಿಲ್ಲಾಧಿಕಾರಿಯ ಬೆವರಿಳಿಸಲಾಗಿದೆ.
ಕರೋನ ನಿಯಮಗಳನ್ನು ಪಾಲಿಸದಿದ್ದರೆ ಅದಕ್ಕೆ ತಕ್ಕ ಕಾನೂನು ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಉಳಿದಿದೆಲ್ಲವನ್ನೂ ಆ ಜಿಲ್ಲಾಧಿಕಾರಿ ಮಾಡಿದ್ದು ಎಲ್ಲರ ಪಿತ್ತ ನೆತ್ತಿಗೇರಿದೆ. ಈಗ ಅವರಿಗೆ ನೋಟಿಸ್ ನೀಡಿದ್ದು, “ಇಂಥ ವರ್ತನೆಯನ್ನು ಪುನರಾವರ್ತಿಸಿದರೆ ಕೆಲಸದಿಂದ ಸಸ್ಪೆಂಡ್ ಮಾತ್ರ ಅಲ್ಲ ಡಿಸ್ಮಿಸ್ ಮಾಡಲಾಗುವುದು” ಎಂಬ ಎಚ್ಚರಿಕೆ ನೀಡಲಾಗಿದೆ. ನೀನು ಜಿಲ್ಲಾಧಿಕಾರಿಯೇ ಆಗಿದ್ದರೂ ಜಿಲ್ಲೆಯ ಜನರ ಸೇವಕ ಎಂಬ ಪ್ರಜ್ಞೆಯನ್ನು ಮೊದಲು ಇಟ್ಟುಕೋ. ಆ ವಯೋವೃದ್ಧರಂತಹ ತೆರಿಗೆ ಪಾವತಿದಾರರು ಇರುವುದರಿಂದಲೇ ನಿನಗೆ ತಿಂಗಳಿಗೆ ಸರಿಯಾಗಿ ವೇತನ ಬರುತ್ತಿರುವುದು ಎಂಬುದನ್ನು ಅರ್ಥ ಮಾಡಿಕೋ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಜಗನ್ಮೋಹನ ರೆಡ್ಡಿ ಈಗ ಹೀರೋ : ಈ ನಡುವೆ ಇಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ದೇಶದ ಜನರ ದೃಷ್ಟಿಯಲ್ಲಿ ಹೀರೋ ಆಗಿದ್ದಾರೆ. ಅವರು ಹೊರಡಿಸಿರುವ ಆದೇಶಗಳು ದೇಶದ ಇತರ ರಾಜ್ಯಗಳಿಗೂ ಮಾದರಿಯಾಗಿವೆ. ಇದನ್ನು ವೈರಲ್ ಮಾಡಿರುವ ಜನತೆ “ನಿಮಗೊಂದು ಸಲಾಂ ಜಗನ್ಮೋಹನ ರೆಡ್ಡಿಯವರೇ” ಎಂದು ಹೇಳುತ್ತಿದ್ದಾರೆ. ಹಾಗಾದರೆ ಅವರು ಹೊರಡಿಸುವ ಆದೇಶವಾದರೂ ಏನು ಎಂದಿರಾ?
ಹಿಂದೆ ಅದೊಂದು ಕಾಲವಿತ್ತು ಅಧಿಕಾರಿಗಳೆಂದರೆ ಸ್ವರ್ಗದಿಂದಲೇ ಇಳಿದು ಬಂದವರೇನೋ ಎಂದು ಜನತೆ ಭಾವಿಸುತ್ತಿದ್ದ ಕಾಲ.
ಕರೋನಾ ಲೆಕ್ಕಕ್ಕೆ ಇಲ್ಲದಷ್ಟು ಮಿತಿಯಲ್ಲಿ ಇರುವಾಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳನ್ನು ವಾಟ್ಸಪ್ ಗ್ರೂಪ್ ಗಳಲ್ಲಿ ಇವರುಗಳು ದೇವತೆಗಳೇನೋ ಎನ್ನುವಂತೆ ಬಿಂಬಿಸಿದ್ದ ಮಂದಿ ಇದೀಗ ಅಗರ್ತಲಾ ಘಟನೆ ಹಾಗೂ ಜಗನ್ಮೋಹನ ರೆಡ್ಡಿ ಅವರ ಆದೇಶಕ್ಕೆ ಅಭಿನಂದನೆ ಸಲ್ಲಿಸುತ್ತಿರುವುದನ್ನು ಗಮನಿಸಿದಾಗ, “ಒಂದಷ್ಟು ನಾಗರೀಕರು ಸುಧಾರಿಸಿದ್ದಾರೆ” ಎನಿಸುವುದು ಸುಳ್ಳಲ್ಲ.
ಜಿ.ಎಂ.ಆರ್. ಆರಾಧ್ಯ
ಹೌದು ಸರ್ ಈ ಬರಹ ದರ್ಪ ಅಧಿಕಾರಿಗಳನ್ನು ಎಚ್ಚರಿಸಿ
ಸುವುದರ ಜೊತೆ ಜನಸಾಮಾನ್ಯರ ಹೇಗೆ ನಡೆಸಿಕೊಳ್ಳಬೇಕೆಂದು ತಿಳಿಹೇಳುವುದರ ಜೊತೆ ಮಾದರಿ ಮುಖ್ಯಮಂತ್ರಿಯ ನಿಯಮಗಳು ಎಲ್ಲಾ ರಾಜ್ಯ ಎಚ್ಚೆತ್ತುಕೊಳ್ಳವ ರೀತಿಯಲ್ಲಿ ಜಗಮೋಹನ್ ರೆಡ್ಡಿ ಸರ್ ಕಾಯಕವನ್ನು ತೋರಿಸಿಕೊಟ್ಟಿದೆ