ಚುನಾವಣೆ:ಅಗತ್ಯ ಮಾಹಿತಿ ಬೇಕೇ,ದೂರು ನೀಡಬೇಕಾ
17ನೇ ಲೋಕಸಭಾ ಚುನಾವಣೆಗೆ ದಿನಾಂಕಗಳು ಘೋಷಣೆಯಾಗಿದೆ. ಸ್ವಚ್ಛ ಮತ್ತು ಪಾರದರ್ಶಕ ಚುನಾವಣೆ ನಡೆಯುವಂತಾಗಲು ಚುನಾವಣಾ ಆಯೋಗ ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ .ಚುನಾವಣಾ ಅಕ್ರಮಗಳನ್ನು ತಡೆಯಲು ಹಾಗೂ ಮತದಾರರಿಗೆ ಬೇಕಾದ ಮಾಹಿತಿಯನ್ನು ಒದಗಿಸಲು ಟೋಲ್ ಫ್ರಿ ಸಂಖ್ಯೆಯನ್ನು ಚುನಾವಣಾ ಆಯೋಗ ಆರಂಭಿಸಿದೆ .
ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ1950 ದೇಶದ ಎಲ್ಲ ರಾಜ್ಯಗಳಲ್ಲು ಹಾಗೂ ಜಿಲ್ಲೆಗಳಲ್ಲೂ ಸಕ್ರಿಯವಾಗಿದೆ. ಚುನಾವಣೆಗೆ ಬೇಕಾಗಿರುವಂತಹ ಎಲ್ಲಾ ಮಾಹಿತಿಗಳು ಫೀಡ್ ಬ್ಯಾಕ್ ಸಲಹೆಗಳು ಮತ್ತು ದೂರುಗಳನ್ನು ಇಲ್ಲಿ ನೋಂದಾಯಿಸಬಹುದಾಗಿದೆ. ಈ ಕೆರೆಯು ಉಚಿತವಾಗಿರಲಿದ್ದು ದೇಶದ ಯಾವುದೇ ಭಾಗದಿಂದಲೂ ಕರೆಯನ್ನು ಮಾಡಬಹುದಾಗಿದೆ. 17ನೇ ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ದೇಶದಲ್ಲಿ ಏಪ್ರಿಲ್ 11 ರಿಂದ ಆರಂಭವಾಗಿ ಮೇ 19 ರ ವರೆಗೆ ಓಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ ಹದಿನಾಲ್ಕು ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಏಪ್ರಿಲ್ ಹದಿನೆಂಟು ಗುರುವಾರ ಇನ್ನುಳಿದ ಹದಿನಾಲ್ಕು ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಏಪ್ರಿಲ್ 23 ಮಂಗಳವಾರ ಮತದಾನ ನಡೆಯಲಿದೆ .
ಲೋಕಸಭಾ ಚುನಾವಣೆ 2019 7 ಹಂತಗಳಲ್ಲಿ ನಡೆಯಲಿದೆ
ಹಂತ 1 (ಏಪ್ರಿಲ್ 11) – 20 ರಾಜ್ಯಗಳಲ್ಲಿ 91 ಕ್ಷೇತ್ರಗಳು ಚುನಾವಣೆಗೆ ಹೋಗುತ್ತವೆ
ಹಂತ 2 (ಏಪ್ರಿಲ್ 18) – 13 ರಾಜ್ಯಗಳಲ್ಲಿ 97 ಕ್ಷೇತ್ರಗಳು
ಹಂತ 3 (ಏಪ್ರಿಲ್ 23) – 14 ರಾಜ್ಯಗಳಲ್ಲಿ 115 ಕ್ಷೇತ್ರಗಳು
ಹಂತ 4 (ಏಪ್ರಿಲ್ 29) – 9 ರಾಜ್ಯಗಳಲ್ಲಿ 71 ಕ್ಷೇತ್ರಗಳು
ಹಂತ 5 (ಮೇ 6) – 7 ರಾಜ್ಯಗಳಲ್ಲಿ 51 ಕ್ಷೇತ್ರಗಳು
ಹಂತ 6 (ಮೇ 12) – 7 ರಾಜ್ಯಗಳಲ್ಲಿ 59 ಕ್ಷೇತ್ರಗಳು
ಹಂತ 7 (ಮೇ 19) – 8 ರಾಜ್ಯಗಳಲ್ಲಿ 59 ಕ್ಷೇತ್ರಗಳು
2019: ರಾಜ್ಯವಾರು ದಿನಾಂಕಗಳು
ಪೂರ್ವ ಭಾರತ ಚುನಾವಣೆ:ಬಿಹಾರ – ಏಪ್ರಿಲ್ 10, 17, 24, 30, ಮೇ 7, 12,ಒಡಿಶಾ – ಏಪ್ರಿಲ್ 11, 18, 23, 29,ಪಶ್ಚಿಮ ಬಂಗಾಳ – ಏಪ್ರಿಲ್ 11, 18, 23, 29 ಮೇ 6, 12, 19,ಜಾರ್ಖಂಡ್ – ಏಪ್ರಿಲ್ 29, ಮೇ 6, 12,19
ಮಧ್ಯ ಭಾರತ:ಛತ್ತೀಸ್ ಘಡ್ – ಏಪ್ರಿಲ್ 11, 18, 23. ಮಧ್ಯ ಪ್ರದೇಶ- ಏಪ್ರಿಲ್ 28, ಮೇ 06, 12, 19
ಪಶ್ಚಿಮ ಭಾರತ:ಗೋವಾ – ಏಪ್ರಿಲ್ 23,ಗುಜರಾತ್ – ಏಪ್ರಿಲ್ 23,ಮಹಾರಾಷ್ಟ್ರ – ಏಪ್ರಿಲ್ 11, 18, 23, 29,ರಾಜಸ್ಥಾನ – ಏಪ್ರಿಲ್ 29, ಮೇ 6
ಉತ್ತರ ಭಾರತ:ಹರಿಯಾಣ – ಮೇ 12,ಹಿಮಾಚಲ ಪ್ರದೇಶ – ಮೇ 19,ಜಮ್ಮು ಮತ್ತು ಕಾಶ್ಮೀರ – ಏಪ್ರಿಲ್ 11, 18, 23, 29, ಮೇ 6,ಪಂಜಾಬ್ – ಮೇ 19,ಉತ್ತರ ಪ್ರದೇಶ – ಏಪ್ರಿಲ್ 11, 18, 23, 29, ಮೇ 6, 12,19,ಉತ್ತರಾಖಂಡ್ – ಏಪ್ರಿಲ್ 11
ದಕ್ಷಿಣ ಭಾರತ:ಕರ್ನಾಟಕ – ಏಪ್ರಿಲ್ 18, 23,ಕೇರಳ – ಏಪ್ರಿಲ್ 23,ತಮಿಳುನಾಡು – ಏಪ್ರಿಲ್ 18,ಆಂಧ್ರ ಪ್ರದೇಶ – ಏಪ್ರಿಲ್ 11,ತೆಲಂಗಾಣ – ಏಪ್ರಿಲ್ 11
ಈಶಾನ್ಯ ಭಾರತ:ಮಣಿಪುರ – ಏಪ್ರಿಲ್ 11,18,ಮೇಘಾಲಯ – ಏಪ್ರಿಲ್ 11,ಮಿಜೋರಾಮ್ – ಏಪ್ರಿಲ್ 11,ನಾಗಾಲ್ಯಾಂಡ್ – ಏಪ್ರಿಲ್ 11,ಅರುಣಾಚಲ ಪ್ರದೇಶ – ಏಪ್ರಿಲ್ 11,ಅಸ್ಸಾಂ – ಏಪ್ರಿಲ್ 11, 18, 23,ಸಿಕ್ಕಿಂ – ಏಪ್ರಿಲ್ 11,ತ್ರಿಪುರ – ಏಪ್ರಿಲ್ 11, 18
ಭಾರತದ ಕೇಂದ್ರಾಡಳಿತ ಪ್ರದೇಶಗಳು:ಅಂಡಮಾನ್ – ಏಪ್ರಿಲ್ 11,ಚಂಡೀಗಢ – ಮೇ 19,ದಾದ್ರಾ ನಗರ ಹವೇಲಿ – ಏಪ್ರಿಲ್ 23,ದಮನ್ ಮತ್ತು ದಿಯು – ಏಪ್ರಿಲ್ 23,ಲಕ್ಷದ್ವೀಪ – ಏಪ್ರಿಲ್ 11,ದೆಹಲಿಯ ಎನ್.ಸಿ.ಟಿ – ಏಪ್ರಿಲ್ 12,ಪುದುಚೇರಿ – ಏಪ್ರಿಲ್ 18