ಚಿಲ್ಲರೆ ಅಂಗಡಿಗಳಲ್ಲೂ ಇನ್ನು ದೊರೆಯುತ್ತದೆ ಪೆಟ್ರೋಲ್ ಹಾಗೂ ಡೀಸೆಲ್
ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ಗಾಗಿ ಬಂಕ್ ಗಳಿಗೆ ಮಾತ್ರ ಹೋಗುವ ಅಗತ್ಯ ತಪ್ಪುತ್ತದೆ.
ಹೌದು ಇದು ವಾಹನ ಸವಾರರಿಗೆ ಸಂತಸದ ಸುದ್ದಿ.ಚಿಲ್ಲರೆ ಅಂಗಡಿಗಳು ಸಹ ಇನ್ನು ನಿಗದಿತ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮಾರಲು ಅಧಿಕೃತ ಪರವಾನಿಗಿ ನೀಡಲು ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸಿದೆ.
ಬ್ರಿಟನ್ ದೇಶಗಳಲ್ಲಿ ಈಗಾಗಲೇ ಈ ಪದ್ಧತಿ ಜಾರಿಯಲ್ಲಿದ್ದು ಅಪಾರ ಜನಪ್ರಿಯ ಸಹ ಆಗಿದೆ.
ಪೆಟ್ರೋಲಿಯಮ್ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಈ ಕುರಿತ ಪ್ರಸ್ತಾವನೆ ಸಿದ್ಧಪಡಿಸುತ್ತಿದ್ದು ತೈಲ ವ್ಯಾಪಾರ ಕ್ಕೆ ಸಂಭಂದಿಸಿದಂತೆ ಈಗಿರುವ ನಿಯಮಗಳನ್ನು ಸಡಿಲ ಗೊಳಿಸುವ ಚಿಂತನೆ ಸಹ ಇದೆ.
ವಾಹನ ಸವಾರರಿಗೆ ಸುಲಭವಾಗಿ ಇಂಧನ ಲಭಿಸುವುವು ಒಂದು ಲಾಭವಾದರೆ ಲಕ್ಷಾಂತರ ಮಂದಿಗೆ ಉದ್ಯೋಗ ಸಹ ದೊರೆಯಲಿದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ತಂಡದ ಆಲೋಚನೆ ಆಗಿದೆ.
ಪದೇ ಪದೇ ಹೊಸ ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡುವ ಮೋದಿ ಅವರು ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಯೋಜನೆ ಜಾರಿಗೆ ತರುವ ನಿರೀಕ್ಷೆ ಇದೆ.