“ಕೊರೋನ ನಿಜವಾಗಲು ಇದೆಯಾ ಸ್ವಾಮೀ?”
ಏನಿದು ಕೋರೋನಾ? ನಿಜ್ವಗ್ಲು ಇದು ಮಹಾಮಾರಿಯೇ? ನಿಜವಾಗಲು ರೂಪಾಂತರ ಹೊಂದುತ್ತಾ ಇದೆಯೇ?
ಇಲ್ಲ ಹಾಗೂ ಇದೆ. ಎರಡು ಉತ್ತರ.
ಅದರ ಬಗೆಗಿನ ವಿಚಿತ್ರ ಗೊಂದಲಕೆ ನಿಜವಾದ ಉತ್ತರ ಕೊಡುವ ಪ್ರಯತ್ನ.
ಹಾಗಾದರೆ ಕೋರೋನ ಇಲ್ಲವಾ? ಮಾದ್ಯಮ ಸುಳ್ಳು ಹೇಳುತ್ತಿದೆಯಾ? ಸರಕಾರ ನಾಟಕ ಮಾಡುತ್ತಿದ್ದಾರಾ? ಖಾಸಗಿ ಆಸ್ಪತ್ರೆ ಗಳು ದುಡ್ಡು ದೋಚುತ್ತಿದ್ದರಾ? ಗೊಂದಲ ಮೂಡುವುದೆಂತು ಸತ್ಯ.
ನಿಜ ವಿಷಯ ಏನೆಂದರೆ, ಕೋರೋನ ಇರುವುದು ೧೦೦ ಕ್ಕೆ ೧೦೦ ಪ್ರತಿಶತ ಸತ್ಯ. ಹಾಗಾದರೆ ಗೊಂದಲವೇನು ಅನ್ನೋದು ನಿಮ್ಮ ಸಹಜ ಪ್ರಶ್ನೆ…
ಅದಕ್ಕೂ ಉತ್ತರಿಸುತ್ತೇನೆ ಕೇಳಿ ನಾನೊಬ್ಬ ವೈದ್ಯ, ೨೦ ವರ್ಷದಿಂದ ಈ ವೃತ್ತಿ ಯಲ್ಲಿ ಇದ್ದೇನೆ. ನಾನು ಕಳೆದೊಂದು ವರ್ಷದ ಅಧ್ಯಯನದ ಆಧಾರದ ಮೇರೆಗೆ ಹೇಳುತ್ತಿದ್ದೇನೆ. ಆದರೆ ಅಧ್ಯಯನದ ನಂತರ ಅನಿಸಿದ್ದು ಅಧ್ಯಯನವೇ ಬೇಕಾಗಿರಲಿಲ್ಲ ಅನ್ನುವುದು..!
ಕೋರೋನ ಎಂಬುವುದು ಎಲ್ಲರಿಗೂ ತಿಳಿದಿರುವಂತೆ ಒಂದು ವೈರಸ್ ಆಗಿದ್ದು , ಸಾಮಾನ್ಯ ಶೀತ ಹಾಗೂ ಅದಕ್ಕೆ ಸಂಭಂದಿಸಿದ ಜ್ವರ, ಕಫ, ಕೆಮ್ಮು, ತಲೆನೋವು ಮತ್ತು ಇನ್ನಿತರ ಸುಸ್ತು ತರುವ ಒಂದು ವ್ಯಾಧಿ… ನಾವು ನೀವು ಎಲ್ಲರೂ ಹುಟ್ಟುವ ಮುಂಚಿನಿಂದ ಇರುವಂತದ್ದು. ಗುಣಮುಖವಾಗಲು ನಮಗೆ ತಿಳಿದಿರುವಂತೆ ೭ ರಿಂದ ೨೧ ದಿನ.
ಈ ವಿಷಯಗಳು ಕೋರೋನಾ ಬಂದಾಗಿನಿಂದ ಇಂಟರ್ನೆಟ್ ಲ್ಲಿ ಸಿಗೋದು ಕಷ್ಟ , ಏಕೆಂದರೆ google ನಲ್ಲಿ ಒಂದು ವರ್ಷದಲ್ಲಿ ಕೋರೋನಕೆ ಸಂಭಂದಿಸಿದ ಹಾಗೆ ಅನೇಕ ಆರ್ಟಿಕಲ್ ಬದಲಾಗಿದೆ. ಹಾಗೂ ನಿಮಗೆ ಸತ್ಯ ತಿಳಿಯಬೇಕೆಂದು ಅನಿಸಿದರೆ November ೨೦೧೯ ಕ್ಕಿಂತ ಮೊದಲಿನ ಆರ್ಟಿಕಲ್ ಹುಡುಕಬೇಕು. ಇನ್ನೂ ೧೦-೧೨ ತರಗತಿಯ ಪಠ್ಯದಲ್ಲು ಸಿಗುತ್ತದೆ. ೧೦೦ಕ್ಕೂ ಅಧಿಕ ಜ್ವರ ತರಬಹುದಾದಂತಹ ವೈರಸ್ ಇದೆ. ಯಾವ ವೈರಸ್ ಕೂಡ ಗಂಡಾಂತರಿ ಅಲ್ಲ ಹಾಗೂ ನಿರ್ಲಕ್ಷಿಸಿದರೆ ಎಲ್ಲವೂ ಮಾರಣಾಂತಿಕವೇ.
ಹಾಗಾದರೆ ಮೊದಲಿನಿಂದ ಇರುವ ಶೀತದ ವೈರಸ್ ಗೆ ಹೆದರುತ್ತಿರುವುದು ಏಕೆ..? ಇಡೀ ಜಗತ್ತು ತಲೆಕೆಡಿಸಿ ಕೊಂಡಿರುವುದು ಏಕೆ? ಮೋದಿ ಸುಳ್ಳು ಹೇಳುತ್ತಿದ್ದಾರೆಯೇ? ಮಾಧ್ಯಮ ಸುಳ್ಳು ಬಿಂಬಿಸುತ್ತಿದೆಯೇ??? ಇದೇಕ್ಕೆಲ್ಲ ಗೊಂದಲವೇ ಕಾರಣ. ಈ ಗೊಂದಲವನ್ನು ಸರಿಯಾಗಿ ಉಪಯೋಗಿಸಿಕೊಳ್ಳುತಿದ್ದಾರೆ ಕಾಣದ ಅನೇಕ ಕೈಗಳು. ಕೋರೋನ ಈ ಪದ ಚೀನಾದಿಂದ ಬಂತೆದು ಬಿಂಬಿಸಿದ್ದು ಮೊದಲ ತಪ್ಪು. ಈಗಾಗಲೇ ಹೇಳಿದಂತೆ ಜ್ವರದ ವೈರಸ್ ಇದು ಮತ್ತೇನು ಅಲ್ಲ.
ಹಾಗಾದರೆ ಆಕ್ಸಿಜನ್ ಸಿಗದೇ ಒದ್ದಾಡುತ್ತಿರುವುದು ಸುಳ್ಳೇ..? ಸಾಯುತ್ತಿರುವುದು ಸುಳ್ಳೇ? ಸಾಯುತ್ತಿರುವುದು ಕೊರೋನ ವೈರಸ್ ಇಂದ ಅಲ್ಲ ಅಂದ ಮೇಲೆ ಏಕೆ ಸಾಯುತ್ತಿದ್ದಾರೆ ಇಷ್ಟೆಲ್ಲಾ ಜನ ಎಂಬುದು ನಿಮ್ಮ ಪ್ರಶ್ನೆ.
ಕೋರೋನ ಹರಡುತ್ತಿಲ್ಲ. ಹೌದು ಹರಡಿಸಲಾಗುತ್ತಿರುವುದು ಕರೋನ ವೈರಸ್ ಅಲ್ಲ. ಅದರ ಭಯವನ್ನು. ನಿಜ, ಭಯ ಎನ್ನುವುದು ಮನುಷ್ಯ ನ ದೌರ್ಬಲ್ಯ, ಈಗೀನ ಯುವ ಪೀಳಿಗೆ ಗಂತು ಎಳ್ಳಷ್ಟೂ ಧೈರ್ಯ ಇಲ್ಲ.
ವಿಷಯವನ್ನ ವಿಮರ್ಶಿಸುವ ಜ್ಞಾನ ಮೊದಲೇ ಇಲ್ಲ ಆದರೂ ಕೆಲವರು ಧನಿ ಎತ್ತಿರುವುದು ಸತ್ಯ ಅವರ ಧನಿ ಅಡಗಿರಿಸಿರುವುದು ಅಷ್ಟೇ ಸತ್ಯ. ನಾನು ಮೊನ್ನೆ ಕನ್ನಡ news ಚಾನೆಲ್ ನೋಡುತ್ತಿದ್ದೆ. ಅಲ್ಲಿ ಡಾಕ್ಟರ್ ಒಬ್ಬರನ್ನು ಕರೆಸಿದ್ದರು ಅವರು ಸ್ಪಷ್ಟವಾಗಿ ಹೇಳುತ್ತಿದ್ದರು ಕೊರೋನ ಸಾಮಾನ್ಯ ವೈರಸ್ ನಾವು ವೈರಸ್ ಇರೋರ ಜೊತೇನೆ ಇದ್ದೇವೆ ಕಳೆದೊಂದು ವರ್ಷದಿಂದ ಹಾಗೂ ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ ಎಂದು. ಆದರೆ ನಮ್ಮಂತ ಪ್ರಾಮಾಣಿಕ ಡಾಕ್ಟರ್ ಮಾತುಗಳು ಬೇಡ. ಹೆದರಿಸಿ ದೇಶವನ್ನು ನಾಶ ಮಾಡುತ್ತಿರುವ ವ್ಯವಸ್ಥೆ ಬೇಕು ನಮ್ಮ ಮಾಧ್ಯಮಗಳಿಗೆ.
📝 ಡಾ.ಅನಿಲ್ ಎಸ್
ಕಾರವಾರ