ಕಾವ್ಯಮಿಡಿತ: ವಾರದ ಕವಿತೆ | ಹೇ ಕಂದಾ ಕ್ಷಮಿಸದಿರು| ಸರೋಜಾ ತಿಗಡೊಳ್ಳಿ
ಜನಮಿಡಿತ ಪತ್ರಿಕೆಯು ಹೊಸದಾದ ಅಂಕಣವೊಂದನ್ನು ಆರಂಭಿಸಿದ್ದು ಸ್ಪರ್ಧೆಯಲ್ಲಿ ವಿಜೇತ ಕವಿತೆಗಳಲ್ಲಿ ಒಂದು ಕವಿತೆಯನ್ನ ವಾರದ ಕವಿತೆಯಾಗಿ ಆಯ್ಕೆ ಮಾಡಿ ಈ ಅಂಕಣದಲ್ಲಿ ಪ್ರಕಟಿಸಲು ನಿರ್ಧರಿಸಿದೆ.
ಈ ವಾರದ ವಿಜೇತ ಕವಿತೆ – ಹೇ ಕಂದಾ ಕ್ಷಮಿಸದಿರು
ಹೇ ಕಂದಾ ಕ್ಷಮಿಸದಿರು
ಕ್ಷಮಿಸದಿರು
ಹೇ ಕಂದಾ ಕ್ಷಮಿಸದಿರು
ಕರುಳು ನಾಭಿಯ ಕತ್ತರಿಸಿ
ಕಾನನದ ಕಾವಳದ ಕೊಳಗೇರಿಯಲ್ಲಿ
ನಿನ್ನ ಎಸೆದು ಕರುಳಿಗೆ ಕೊಳ್ಳಿ ಇಟ್ಟು
ಹೋದವಳು ಅದ್ಯಾವ ಮಹಾನ್ ತಾಯಿ
ಮಮತೆಯ ಮಡಿಲಲ್ಲಿ ಮುದ್ದಿಸಿ
ಮುತ್ತಿಟ್ಟು ಮಲಗಿಸಬೇಕಾದವಳು
ಕರುಣೆಯಿಲ್ಲದೆ ನಿನ್ನ ತೊರೆದಳೆಂದರೆ
ಅದ್ಯಾವ ಕಾಮುಕ ರಾಕ್ಷಸನ ಹಸಿವಿಗೆ ಬಲಿಯಾದಳು ತಾನೇ ಬಂದಿಯಾದಳೋ
ದುರುಳರ ದುರಂತಕ್ಕೆ ಸಿಕ್ಕಳು
ದುರುಳತ್ವದಲ್ಲಿ ತಾನೆ ಮೆರೆದಳು
ಕತ್ತಲ ಬದುಕಿನಲ್ಲಿ ನಿನ್ನ ಕೊರಗಿಸಿದಳು
ಸಮಾಜಕ್ಕೆ ತುತ್ತಾಗುವೇನೆಂಬ ಭಯದ ಭರದಲ್ಲಿ ತಂದೆಸೆದಳು ಕಾರಣ ತಿಳಿಯಲಿಲ್ಲ
ಅದೇನೇ ಇರಲಿ ಯಾರೋ ಮಾಡಿದ ತಪ್ಪಿಗಾಗಿ
ಇನ್ಯಾರಿಗೋ ಶಿಕ್ಷೆ ಎಂಬಂತೆ ಅರಿಯದ ಒಡಲ ಕುಡಿ ನಾಯಿನರಿಗಳಿಗೆ ಆಹಾರವಾಗಿ ನೊಣಗಳು ಮುತ್ತಿಡುವಾಗ ಹೇ ದೇವಾ ನಿನಗಾದರೂ ಕರುಣೆ ಬಾರದೆ ಒಡಲಿಗೆ ಕಳಿಸುವ ಮುನ್ನ ಯೋಚಿಸಬಾರದೇ
–✍ ಸರೋಜಾ ತಿಗಡೊಳ್ಳಿ
ಕವನ ಮತ್ತು ಲೇಖನಗಳಿಗೆ ಆಹ್ವಾನ
ಪ್ರತಿ ಮಂಗಳವಾರ ಜನಮಿಡಿತ ದಿನಪತ್ರಿಕೆ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಪುಟ ಕಾವ್ಯಮಿಡಿತ ಪ್ರಕತಿಸುತಲಿದ್ದು, ಆಸಕ್ತರು ತಮ್ಮ ಕವನಗಳನ್ನು ಹಾಗೂ ಲೇಖನಗಳನ್ನು ನಮ್ಮ Facebook page Janamiditha ಕ್ಕೆ ಅಥವಾ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಬಹುದು.
Mail: janamiditha@gmail.com