ಕಾವ್ಯಮಿಡಿತ: ವಾರದ ಕವಿತೆ | ಹೆಣ್ಣು…ಸಂಸಾರದ ಕಣ್ಣು | ಮಹಾಂತೇಶ ಮಾಗನೂರ, ಬೆಂಗಳೂರು

ಜನಮಿಡಿತ ಪತ್ರಿಕೆಯು ಹೊಸದಾದ ಅಂಕಣವೊಂದನ್ನು ಆರಂಭಿಸಿದ್ದು ಸ್ಪರ್ಧೆಯಲ್ಲಿ ವಿಜೇತ ಕವಿತೆಗಳಲ್ಲಿ ಒಂದು ಕವಿತೆಯನ್ನ ವಾರದ ಕವಿತೆಯಾಗಿ ಆಯ್ಕೆ ಮಾಡಿ ಈ ಅಂಕಣದಲ್ಲಿ ಪ್ರಕಟಿಸಲು ನಿರ್ಧರಿಸಿದೆ.

ಈ ವಾರದ ವಿಜೇತ ಕವಿತೆ –  ಹೆಣ್ಣು…ಸಂಸಾರದ ಕಣ್ಣು

ಹೆಣ್ಣು…ಸಂಸಾರದ ಕಣ್ಣು

ಮನೆತನದ ಯೋಗಕ್ಷೇಮಕ್ಕೆ

ಇಡುವಳು ಜೀವನವ ಅಡಮಾನ

ನಾಲ್ಕು ಸಿಹಿ ಮಾತುಗಳೆ

ಅವಳಿಗೆ ಬಹುಮಾನ!

ಅವಳು ಒಪ್ಪುವಳೆಂದು ಕೇಳದೆಯೇ

ಮಾಡಿದರೂ ಕೆಲವು ತೀರ್ಮಾನ

ಅದಕೊಪ್ಪಿ, ಅಳಿಸದೆ ಉಳಿಸುವಳು

ಪತಿರಾಯನ ಮಾನ!

ಚೆಲುವನ್ನು ಬದಿಗಿಟ್ಟು

ಒಲವನ್ನು ಧಾರೆ ಎರೆಯುವಳು

ಬಲವನ್ನು ಮನಕೆ ತುಂಬುತ್ತ

ಗೆಲುವನ್ನು ಸದಾ ತರುವಳು!

ಸಂಸಾರದ ನೊಗವ

ಎಳೆಯುವಳು ಜೀವಮಾನ

ಆಸೆ ಆಕಾಂಕ್ಷೆಗಳಿಲ್ಲ

ಪಡೆಯಲೇಬೇಕೆಂದು ಸ್ಥಾನಮಾನ!

ಕಷ್ಟಗಳ ನುಂಗಿ ನೋವನು ತಿಂದು

ನೀಗಿಸಿಕೊಳ್ಳುವಳು ಹಸಿವು ದಾಹ

ಎಲ್ಲರೊಂದಿಗೆ ಬೆರೆತು ತುಂಬುವಳು

ಎಲ್ಲರಲಿ ಸಹನೆ ಸಹಬಾಳ್ವೆ ಸ್ನೇಹ!

                                                                                       ಮಹಾಂತೇಶ ಮಾಗನೂರ, ಬೆಂಗಳೂರು

                                                                                                         9980022155

ಕವನ ಮತ್ತು ಲೇಖನಗಳಿಗೆ ಆಹ್ವಾನ

ಪ್ರತಿ ಮಂಗಳವಾರ ಜನಮಿಡಿತ ದಿನಪತ್ರಿಕೆ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಪುಟ ಕಾವ್ಯಮಿಡಿತ ಪ್ರಕತಿಸುತಲಿದ್ದು, ಆಸಕ್ತರು ತಮ್ಮ ಕವನಗಳನ್ನು ಹಾಗೂ ಲೇಖನಗಳನ್ನು ನಮ್ಮ Facebook page Janamiditha ಕ್ಕೆ ಅಥವಾ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಬಹುದು.
Mail: janamiditha@gmail.com

Leave a Reply

Your email address will not be published. Required fields are marked *