ಕರ್ನಾಟಕದ ಕರ್ಣ ಅಂಬರೀಷ್ ಇನ್ನಿಲ್ಲ
ಹುಚ್ಚೇಗೌಡ ಮತ್ತು ಪದ್ಮಮ್ಮ ದಂಪತಿಯ 6 ನೆಯ ಪುತ್ರರಾಗಿ 1952 ಮೇ 29 ರಂದು ಜನಿಸಿದ್ದ ಅಮರನಾಥ್ ಮೂಲತಃ ದೊಡ್ದನರಸಿನ ಹಳ್ಳಿಯವರು.
ಮಂಡ್ಯದಲ್ಲಿ ಪ್ರಾಥಮಿಕ ಹಾಗೂ ಮೈಸೂರು ನಲ್ಲಿ ಪದವಿ ಶಿಕ್ಷಣ ಮುಗಿಸಿದ್ದ ಅವರು ಕೆಲ 1971 ರಲ್ಲಿ ಚಿತ್ರರಂಗ ಪ್ರವೇಶಿಸಿದ್ದರು.
ಅಂಬರೀಶ್ ಅವರು ಖ್ಯಾತ ಪಿಟೀಲು ವಾದಕ ಪಿಟೀಲು ಚೌಡಯ್ಯ ಅವರ ಮೊಮ್ಮೊಗ.
ಕಲಿಯುಗ ಕರ್ಣ ಎಂದೇ ಖ್ಯಾತರಾಗಿದ್ದ ಅವರು ಡಾ.ರಾಜ್ ಬಳಿಕ ಕನ್ನಡ ಚಿತ್ರರಂಗದ ಅಣ್ಣ ಎಂದೇ ಕರೆಯಲ್ಪಡುತ್ತಿದ್ದರು.
ಮಂಡ್ಯದ ಗಂಡು ಅಂಬಿ ಮಾಜಿ ಸಚಿವರು ಸಹ.
ನಾಗರಹಾವು ಎಂಬ ಚಿತ್ರದಿಂದ ಪುಟ್ಟಣ್ಣಕನಗಾಲ್ ಅವರ ಮೂಲಕ ಚಿತ್ರರಂಗ ಪ್ರವೇಶಿದ ಅಂಬಿ ನಂತರ ಎಂದು ಹಿಂದಿರುಗಿ ನೋಡಲಿಲ್ಲ.
ದಸರಾ ಉದ್ಘಾಟಿಸಿದ ಮೊದಲ ನಟ ಎಂಬ ಖ್ಯಾತಿ ಅವರಿಗಿತ್ತು.ಕರ್ನಾಟಕ ವಿವಿ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು.
ನಾಗರಹಾವು,ಶುಭಾಮಂಗಳ,ಟೋನಿ,ಅಜಿತ್,ಕರ್ಣ,ಒಲವಿನ ಉಡುಗೊರೆ,ಏಳುಸುತ್ತಿನ ಕೋಟೆ,ನಾಗರಹೊಳೆ,ಸ್ನೇಹಿತ ರ ಸವಾಲ್,ಮೃಗಾಲಯಅರ್ಜುನ್,ಸಾಂಗ್ಲಿಯಾನ,ಜಯಭೇರಿ,
ಒಂಟಿಸಲಾಗ,ಒಡಹುಟ್ಟಿದವರು,ದಿಗ್ಗಜರು,ರಂಗನಾಯಕಿ,ತಿರುಗುಬಾಣ, ಮಸನಡ ಹೂ, ಕಥಾಸಂಗಮ,ಅವಳಹೆಜ್ಜೆ,
ಪೂರ್ಣಚಂದ್ರ,ಜಯಕರ್ನಾಟಕ, ಶ್ರೀಮಂಜುನಾಥ,ರಂಗನಾಯಕಿ. ಗಜೇಂದ್ರ, ಗುಂಡಾ ಗುರು. ಮಿಸ್ಟರ್ ರಾಜಾ,ಇಂದ್ರಜಿತ್, ಮತ್ಸರ,ಹಾಂಕಾಂಗ್ನಲ್ಲಿ ಏಜೆನ್ಟ್ ಅಮರ್ ಅವರ ಕೆಲವು ಚಲನಚಿತ್ರಗಳ.
ಈತ್ತಿಚಿನ ಅವರ ಚಿತ್ರ “ಅಂಬಿ ನಿನಗೆ ವಯಸ್ಸಾಯ್ತೋ”.
ಇಂದು ಬೆಳಿಗ್ಗೆ ನೆಡೆದ ಬಸ್ ದುರಂತಕ್ಕೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದರು.
ಮುಖ್ಯಮಂತ್ರಿ ಸೇರಿದಂತೆ ಚಿತ್ರ ರಂಗದ ಗಣ್ಯರು ವಿಕ್ರಂ ಆಸ್ಪತ್ರಗೆ ಧಾವಿಸುತ್ತಿದ್ದಾರೆ.
ಅವರ ಅಂತ .ಚಕ್ರವ್ಯೂಹ ಹಾಗೂ ನ್ಯೂದೆಲ್ಲಿ ಟೈಮ್ಸ್ ಚಿತ್ರ ದೊಡ್ಡ ಹೆಸರು ತಂದುಕೊಟ್ಟಿದ್ದವು.
ನಟಿ ಸುಮಲತಾ ಹಾಗೂ ಪುತ್ರ ಅಭಿಷೇಕ್ ಗೌಡ ಅವರು ಸೇರಿದಂತೆ ಅಪಾರ ಅಭಿಮಾನಿಗಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ನಟ ಪುನೀತ್,ಯಶ್.ಸೇರಿ ಅನೇಕ ನಟರು ಆಸ್ಪತ್ರೆಗೆ ಆಗಮಿಸಿದ್ದಾರೆ.
ಆಸ್ಪತ್ರೆ ಎದಿರು ಜಮಾಯಿಸುತ್ತಿರುವ ಬಾರಿ ಸಂಖ್ಯೆಯ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಮಂಡ್ಯದಲ್ಲಿ ನಾಳೆ ಅಂತ್ಯಕ್ರಿಯೆ ಎಂದು ಹೇಳಲಾಗುತ್ತಿದೆ.
ಅಭಿಮಾನಿಗಳ ದರ್ಶನಕ್ಕೆ ಕಂಠೀರವ ಸ್ಟೇಡಿಯಂ ನಲ್ಲಿ ಬೆಳಿಗ್ಗೆ ವ್ಯವಸ್ಥೆ ಮಾಡಲಾಗುತ್ತಿದೆ.
ಸದ್ಯೆ ಆಸ್ಪತ್ರೆ ಇಂದ ಪಾರ್ಥಿವ ಶರೀರವನ್ನು ಜೆ.ಪಿ.ನಗರದ ನಿವಾಸಕ್ಕೆ ತರಲಾಗುತ್ತಿದೆ.