ಕಡೆಗೂ ಸ್ಪರ್ಧೆಗೆ ಒಪ್ಪಿದ ಎಸ್.ಎಸ್.ಮಲ್ಲಿಕಾರ್ಜುನ್
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಲು ಕಡೆಗೂ ಎಸ್. ಎಸ್.ಮಲ್ಲಿಕಾರ್ಜುನ ಅವರು ಒಪ್ಪಿಗೆ ಸೂಚಿಸಿದ್ದಾರೆ.
ಇಂದು ಕಾಂಗ್ರೆಸ್ ರಾಜ್ಯ ಮುಖಂಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಲ್ಲಿಕಾರ್ಜುನ್ ಅವರ ಮನ ಒಲಿಸಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಮೊದಲು ಶಾಮನೂರು ಶಿವಶಂಕರಪ್ಪ ಅವರ ಹೆಸರನ್ನು ಪ್ರಕಟಿಸಿತ್ತು. ಆದರೆ ವಯಸ್ಸಿನ ಕಾರಣ ನೀಡಿ ಅವರು ಟಿಕೆಟ್ ನಿರಾಕರಿಸಿದ್ದರು.
ಇದಾದ ಬಳಿಕ ಅವರ ಪುತ್ರ ಮಲ್ಲಿಕಾರ್ಜುನ್ ಅವರು ಸ್ಪರ್ಧೆಗೆ ಒಲವು ತೋರಿರಲಿಲ್ಲ.ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ಚಿಂತೆ ಹಾಗೂ ಕುತೂಹಲ ದಾವಣಗೆರೆ ಜನರಲ್ಲಿ ಇತ್ತು.
ಈ ನಡುವೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜಪ್ಪ ಅವರ ಹೆಸರೇ ಅಂತಿಮ ಎಂಬ ಸುದ್ದಿ ಬಂತು.ಇದಾದ ಬಳಿಕ ತೇಜಸ್ವಿ ಪಟೇಲ್ ಅವರ ಹೆಸರು ಕೇಳಿ ಬಂದಿತ್ತು.ಆದರೆ ಇಂದು ಅದಕ್ಕೆಲ್ಲ ತೆರೆ ಬಿದ್ದಿದ್ದು ಕಡೆಗೂ ಮಲ್ಲಿಕಾರ್ಜುನ್ ಅವರು ಸ್ಪರ್ದಿಸಲು ಒಪ್ಪಿಗೆ ಸೂಚಿಸಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶಾಮನೂರು ಕುಟುಂಬ ಹೊರತುಪಡಿಸಿ ಬೇರೆ ಯಾರು ಸ್ಪರ್ಧಿಸಿದರು ಸಹ ಇಲ್ಲಿ ಬಿಜೆಪಿ ಗೆಲುವು ಸುಲಭ ಎಂಬುದು ಗೊತ್ತಿರುವ ವಿಷಯ. ಆದರೆ ಈಗ ಮಲ್ಲಿಕಾರ್ಜುನ್ ಸ್ಪರ್ಧೆ ಚುನಾವಣಾ ಕಣವನ್ನು ರಂಗೇರಿಸಿದೆ.
ಆದರೂ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಬಂದು ಹೋದ ನಂತರವೇ ಸ್ಪಷ್ಟ ಚಿತ್ರ ನ ದೊರೆಯಲಿದೆ.