ಎಸ್.ಎಸ್.ಎಲ್.ಸಿ 2019 ಫಲಿತಾಂಶ ನೋಡುವುದು ಹೇಗೆ
“ಜನಮಿಡಿತ” ದಿನಪತ್ರಿಕೆಯ ಮಾಹಿತಿ
ಬೆಂಗಳೂರು ಏ. 29 – ಹಲವು ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬೀಳಲು ದಿನಾಂಕ ನಿಗದಿಯಾಗಿದೆ. ಎಸ್ ಎಸ್ ಎಲ್ ಸಿ ಬೋರ್ಡ್ ನಿರ್ದೇಶಕಿ ವಿ. ಸುಮಂಗಳ ಇಂದು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ದಿನಾಂಕವನ್ನು ತಿಳಿಸಿದ್ದಾರೆ. ಇಂದು ಫಲಿತಾಂಶ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.
ಪರೀಕ್ಷೆ ಬರೆದಿರುವ 8,41,666 ವಿದ್ಯಾರ್ಥಿಗಳ ಹಣೆಬರಹ ಅಂದು ನಿರ್ಧಾರವಾಗಲಿದೆ.
ವಿದ್ಯಾರ್ಥಿಗಳು ಫಲಿತಾಂಶ ನೋಡಲು ಅಧಿಕೃತ ಎಸ್ ಎಸ್ ಎಲ್ ಸಿ ಬೋರ್ಡ್ ವೆಬ್ ಸೈಟ್ karresults.nic.in ಗೆ ಭೇಟಿ ನೀಡಬೇಕು.
ಫಲಿತಾಂಶ ನೋಡುವುದು ಹೇಗೆ?
ಹಂತ 1: ಅಧಿಕೃತ ವೆಬ್ ಸೈಟ್ karresults.nic.in ಮತ್ತು kseeb.kar.nic.in ಲಾಗ್ ಆನ್ ಮಾಡಿ.
ಹಂತ 2: ಹೋಂ ಪೇಜ್ ನಲ್ಲಿ SSLC Result ಕ್ಲಿಕ್ ಮಾಡಿ.
ಹಂತ 3: ನಿಮ್ಮ ರಿಜಿಸ್ಟರ್ ನಂಬರ್ ಟೈಪ್ ಮಾಡಿ ಎಂಟರ್ ಕೊಡಿ.
ಹಂತ 4: ನಿಮ್ಮ ಎಸ್ ಎಸ್ ಎಲ್ ಸಿ ಫಲಿತಾಂಶ ಸ್ಕ್ರೀನ್ ಮೇಲೆ ಬರುತ್ತದೆ.
ಹಂತ 5: ಫಲಿತಾಂಶದ ಪ್ರತಿಯನ್ನು ಡೌನ್ಲೋಡ್ ಮಾಡಿ, ಪ್ರಿಂಟ್ ತೆಗೆದುಕೊಳ್ಳಿ.
ಎಸ್ ಎಂ ಎಸ್ ಮೂಲಕ ಎಸ್ ಎಸ್ ಎಲ್ ಸಿ ರಿಸಲ್ಟ್ ಪಡೆಯಲು ಹೀಗೆ ಮಾಡಿ.
KSEEB10ROLLNUMBER ಟೈಪ್ ಮಾಡಿ 56263 ನಂಬರಿಗೆ ಕಳಿಸಿ.
ಕೆಲವು ವಿದ್ಯಾರ್ಥಿಗಳು ತಮ್ಮ ಫಲಿತಾಂಶದ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳುತ್ತಾರೆ. ಕಡಿಮೆ ಅಂಕ ಬಂತು, ಫೇಲ್ ಆಯಿತು ಎಂದು ತೀರ ಬೇಸರ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಸರಿಯಾದ ಮೌಲ್ಯ ಮಾಪನವಾಗದೇ ಕಡಿಮೆ ಅಂಕ ಬಂದಿರುತ್ತದೆ. ಅಂಥವರು ಮರು ಮೌಲ್ಯಮಾಪನ ಮಾಡಿಸಬಹುದು. ಎಸ್ ಎಸ್ ಎಲ್ ಸಿ ಬೋರ್ಡ್ ಮರು ಮೌಲ್ಯ ಮಾಪನದ ಫಲಿತಾಂಶದ ದಿನಾಂಕವನ್ನೂ ನಿಗದಿ ಮಾಡಿ ಪ್ರಕಟ ಮಾಡುತ್ತದೆ. ಮರು ಮೌಲ್ಯಮಾಪನದ ಬಳಿಕ ನಿಮ್ಮ ಅಂಕಗಳಲ್ಲಿ ಏನಾದರೂ ಬದಲಾವಣೆ ಆಗಿದ್ದರೆ ಅದು ನಿಮ್ಮ ಉತ್ತರ ಪತ್ರಿಕೆಯಲ್ಲಿ ಕಾಣ ಸಿಗುತ್ತದೆ.