ಎತ್ತ ಸಾಗಿವೆ ಸಂಬಂಧಗಳು
ಇದನ್ನು ವಿಡಂಬನೆ ಅಂತಾದರೂ ತಿಳಿದುಕೊಳ್ಳಿ ಅಥವಾ ಪೋಸ್ಟ್ ಮಾರ್ಟಂ ಅಂತಾದರೂ ತಿಳಿದುಕೊಳ್ಳಿ.
ಮುಂದೆ ಬರುವ 20-25 ವರ್ಷಗಳಲ್ಲಿ ನಮ್ಮ ಮನೆಗಳಿಂದ ಕೆಲವು ಸಂಬಂಧಗಳು ಕಾಣೆಯಾಗಲಿವೆ.
ಅಣ್ಣ – ಅತ್ತಿಗೆ
ಮೈದುನ – ನೆಗೆಣ್ಣಿ (ಓರಗಿತ್ತಿ)
ಚಿಕ್ಕಪ್ಪ – ಚಿಕ್ಕಮ್ಮ
ಸೋದರತ್ತೆ – ಮಾವ
ಮಾಮ – ಮಾಮಿ
ಸೋದರಳಿಯ – ಸೊಸೆ
ಇತ್ಯಾದಿ ಸಂಬಂಧಗಳು ನಮ್ಮ ಮನೆಗಳಿಂದ ಶಾಶ್ವತವಾಗಿ ಕಾಣೆಯಾಗಲಿವೆ.
ಈಗಾಗಲೇ ಬರೀ ಎರಡು – ಎರಡೂವರೆ ಜನರ ಕುಟುಂಬಗಳು ಮಾತ್ರ ನಿಮಗೆ ನೋಡಲು ಸಿಗ್ತಾ ಇವೆ. ಪರಿಸ್ಥಿತಿ ನಾನು ಹೇಳುವುದಕ್ಕಿಂತ ಹೆಚ್ಚಾಗಿ ಇನ್ನೂ ಕೆಡಲಿದೆ
ಅಮ್ಮನ ಸ್ಥಾನದಲ್ಲಿ ನಿಂತು ನಮ್ಮನ್ನು ನೋಡಿಕೊಳ್ಳುವ ಪ್ರೀತಿಯ ಅಕ್ಕ ಇರಲ್ಲ,
ನಾನಿದ್ದೇನೆ ಅಂತ ಹೆಗಲ ಮೇಲೆ ಕೈ ಹಾಕಿ ಧೈರ್ಯ ಕೊಡುವ ಅಣ್ಣ ಇರಲ್ಲ,
ಕಾಟ ಕೊಡುವ ಚಿಕ್ಕ ತಮ್ಮ ಇರಲ್ಲ,
ಮನೆಯಲ್ಲಿ ಮಗುವಂತೆ ನೋಡಿಕೊಳ್ಳುವ ಅತ್ತಿಗೆ ಇರಲ್ಲ,
ರಾತ್ರಿ ತಡವಾಗಿ ಬಂದು ಅಪ್ಪನಿಗೆ ಅಣ್ಣನಿಗೆ ಹೇಳಬೇಡ ಅಂತ ಕಾಟ ಕೊಡುವ ಮೈದುನ ಇರಲ್ಲ,
ಅತ್ತಿಗೆ ಮಾಡಿದ್ದನ್ನು ಕಿವಿ ಚುಚ್ಚುವ ನಾದಿನಿ ಇರಲ್ಲ,
ವರನಿಗೆ ಅಣ್ಣ, ತಮ್ಮ, ಅಕ್ಕ, ತಂಗಿ ಇರದ ಮನೆ ಹುಡುಕುವ ಕಷ್ಟ ಮಗಳ ಅಪ್ಪ ಅಮ್ಮನಿಗೆ ಇರಲ್ಲ,
ಒಬ್ಬಳೇ ಮಗಳು ಸೊಸೆಯಾಗಿ ಬರಲಿಲ್ಲ ಅಂದ್ರೆ ನಮ್ಮ ಬಡ್ಡಿಮಗನಿಗೆ ಎಲ್ಲಾ ಆಸ್ತಿ ಸಿಗಲ್ಲ ಅಂತ ಚಿಂತೆ ಮಾಡುವ ಅಗತ್ಯ ಇರಲ್ಲ,
ಸೊಸೆ ಯಾವಾಗಲೂ ಒಬ್ಬಂಟಿಯೇ,
ಅವಳಿಗೆ ಕಾಟ ಕೊಡುವ ನಾದಿನಿ ಎಲ್ಲಿ?
ಪ್ರತಿಯೊಂದರಲ್ಲೂ ಪೈಪೋಟಿ ಕೊಡುವ ಓರಗಿತ್ತಿ ಎಲ್ಲಿ?
ತವರಿನಲ್ಲಿ ಅಪ್ಪ ಅಮ್ಮ ಯಾವಾಗಲೂ ಒಬ್ಬಂಟಿಗಳೇ,
ರಾಖಿ ಕಟ್ಟಲು ಊರಿನಿಂದ ತಪ್ಪದೇ ಬರುತ್ತೇನೆಂದು ಹೇಳುವ ಅಣ್ಣ ತಮ್ಮ ಎಲ್ಲಿ?
ತನ್ನ ಮಗನಿಗೆ ಹೆಚ್ಚು ಮಾರ್ಕ್ಸು ಬಂತೆಂದು ಅಪ್ಪನ ಹತ್ತಿರ ಫಿಟ್ಟಿಂಗು ಇಡುವ ಸೋದರತ್ತೆ ಎಲ್ಲಿ?
ಮೊದಲು ಹೇಳಿದಂತೆ 20 – 25 ವರ್ಷಗಳಲ್ಲಿ ಈ ಸಮಯ ಬರ್ತಾ ಇದೆ.
ಈಗ ನಡೆಯುತ್ತಾ ಇರುವ “ಒಂದೇ ಮಗು ಸಾಕಪ್ಪಾ, ಅದನ್ನೇ ಒಳ್ಳೆ ಶಾಲೆಗೆ ಕಳಿಸಿ, ಚೆನ್ನಾಗಿ ಓದಿಸಿದರೆ ಬದುಕು ಸಾರ್ಥಕ” ಅನ್ನೋ ಗ್ರೇಟ್ ಇಂಡಿಯನ್ ಫ್ಯಾಷನ್ ಈಗ ಮನೆ ಮನೆಯಲ್ಲಿ ಜನಪ್ರಿಯ ಆಗಿದೆ. ಅದರೊಟ್ಟಿಗೆ ಬರೀ ನಾನು, ನನ್ನದು, ನಾನು ಮಾತ್ರ ಅನ್ನೋ ಮನೋಭಾವ ವ್ಯಾಪಕವಾಗಿ ಹಬ್ಬುತ್ತಾ ಇದೆಯಾ ಅಥವಾ ಈಗಾಗಲೇ ಮನೆ ಮನೆಗಳನ್ನು ತಲುಪಿದೆಯಾ?
ಕುಟುಂಬಗಳು, ಸಂಬಂಧಗಳು ನಾಶ ಆಗ್ತಾ ಇವೆ.
ಇಬ್ಬರೇ ಮಕ್ಕಳು ಇರುವ ಕುಟುಂಬಗಳೂ ಕಡಿಮೆ ಆಗ್ತಾ ಇವೆ
ಮೊದಲು ಚಿಕ್ಕ ಚಿಕ್ಕ ಮನೆಗಳಲ್ಲೂ ಸಹ ಕೂಡು ಕುಟುಂಬಗಳು, ದೊಡ್ಡ ಪರಿವಾರಗಳು ಆರಾಮಾಗಿ ನಗ್ತಾ ನಗ್ತಾ ಜೀವನ ನಡೆಸಿದ್ದು ಹೌದಲ್ವಾ? ಈಗ ದೊಡ್ಡ ದೊಡ್ಡ ಮನೆಗಳಲ್ಲಿ ಎರಡೂವರೆ ಮೂವರು ಜನ ಇರುವುದೇ ಒಂದು ದೊಡ್ಡಸ್ತಿಕೆ ಆಗಿಬಿಟ್ಟಿದೆ.
ನಾವು ನಮಗೆ ಸಾಕಲು ಕಷ್ಟ ಆಗುತ್ತೆ ಅಂತ ಒಂದೇ ಮಗು ಹೆತ್ತು ಮುಂದೆ (ನಾವಿಬ್ಬರೂ ಹೋದ ಮೇಲೆ) ಅದಕ್ಕೆ ಕಷ್ಟ ಸುಖ ಹೇಳಿಕೊಳ್ಳಲು ಒಬ್ಬರೂ ಇಲ್ಲದಂತೆ ಮಾಡ್ತಾ ಇದೀವಿ ಅಂತ ನಮಗೆ ಅನ್ನಿಸೋಲ್ವಾ?
ಆದರೇ, ನಾವೇ ಪುಣ್ಯ ವಂತರು,
ಇದನ್ನೆಲ್ಲಾ ಅನುಭವಿಸಿದ್ದೇವೆ, ನಮ್ಮದು ಲಿಮಿಟೆಡ್ ಎಡಿಷನ್ ಜನರೇಷನ್ 😀, ನಮ್ಮ ಮುಂದಿನ ಪೀಳಿಗೆಗೆ ಇದರ ಕಥೆ ಮಾತ್ರ ಕೇಳಲು ಸಾಧ್ಯ 🙏🙏🙏
☺🤔❤️🙏