ಈಗ ಪೊಲೀಸರೂ ಬೈಕುಗಳ ಕಳ್ಳತನಕ್ಕೆ ಇಳಿದರೇ…..!? ಬೆಂಗಳೂರಿನಲ್ಲಿ ಹೀಗೊಂದು ಪ್ರಕರಣ ಸಿಸಿಟಿವಿಯಲ್ಲಿ ಸೆರೆ
“ಬೇಲಿಯೇ ಎದ್ದು ಹೊಲ ಮೇಯ್ದಂತೆ “ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ಇಲ್ಲೊಂದು ಘಟನೆ ಮೇಲಿನ ಮಾತಿಗೆ ತಾಜಾ ಉದಾಹರಣೆಯಾಗಿದೆ.
ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಕೆಲ ಆರಕ್ಷಕರೇ ಕಳ್ಳತನಕ್ಕೆ ಇಳಿದರೆ ಇಳಿದರೆ ಹೇಗಾಗಬೇಡ?…ಹೌದು, ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಆರಕ್ಷಕರೇ ಕದ್ದಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ರಾಜಾಜಿನಗರದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದ್ದು , ಈ ಘಟನೆ ವಾಹನ ಮಾಲೀಕರಲ್ಲಿ ಆತಂಕ ಸೃಷ್ಟಿಸಿದೆ. ಇತ್ತೀಚೆಗೆ ಬೈಕ್ ಕಳ್ಳರ ಕಾಟ ಹೆಚ್ಚಾಗಿದೆ . ಇದರ ಬೆನ್ನಲ್ಲೇ ಇದೀಗ ಪೊಲೀಸರು ಸಹ ಬೈಕ್ ಕಲಿಯಲು ಮುಂದಾಗಿದ್ದಾರೆ ಎಂಬ ಅನುಮಾನವೂ ಮೂಡತೊಡಗಿ ಆತಂಕ ಸೃಷ್ಟಿಸಿದೆ.
ರಾಜಾಜಿನಗರದ ಮನೆಯ ಕಾಂಪೌಂಡ್ ಒಳಗಡೆ ನಿಲ್ಲಿಸಿದ್ದ ಬೈಕ್ಅನ್ನು ಪೊಲೀಸರೇ ಕದ್ದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನೈಟ್ ರೌಂಡ್ಸ್ ನಲ್ಲಿದ್ದ ರಾಜಾಜಿನಗರ ಪೊಲೀಸರು ಕಾಂಪೌಂಡ್ ಒಳಗಿದ್ದ ಬೈಕನ್ನು ಕಳವು ಮಾಡಿರುವುದು ಸಿಸಿಟಿವಿ ಮೂಲಕ ತಿಳಿದಿದೆ.
ರಾತ್ರಿ ಬೈಕ್ ನಿಲ್ಲಿಸಿದ್ದ ಮಾಲೀಕ ಮರುದಿನ ಬೆಳಗ್ಗೆ ಬೈಕ್ ಕಾಣದಿ ರುವುದನ್ನು ಕಂಡು ಗಾಬರಿಯಾಗಿದ್ದಾನೆ. ತಕ್ಷಣ ಮನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದು ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ 300ರೂ. ಪಡೆದು ಪೊಲೀಸರು ಬೈಕ್ ನೀಡಿದ್ದಾರೆ ಎಂದು ಮಾಲೀಕ ಆರೋಪಿಸಿದ್ದಾರೆ.
ಪೊಲೀಸರು ಈ ಆರೋಪವನ್ನು ಅಲ್ಲಗಳೆದಿದ್ದು, ರಾತ್ರಿವೇಳೆ ಬೈಕನ್ನು ರಸ್ತೆಯಲ್ಲಿ ನಿಲ್ಲಿಸಲಾಗಿತ್ತು. ನೈಟ್ ಬೀಟ್ ನಲ್ಲಿದ್ದ ಪೊಲೀಸರು ಇದನ್ನು ನೋಡಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಬೈಕಿನ ಕೀ ಸಹ ವಾಹನದಲ್ಲೇ ಇತ್ತು ಈ ಹಿನ್ನೆಲೆಯಲ್ಲಿ ಈ ಪೊಲೀಸ್ ಠಾಣೆಗೆ ಬೈಕ್ ತೆಗೆದುಕೊಂಡು ಬಂದಿದ್ದಾರೆ ಎಂದು ವಾದಿಸಿದ್ದಾರೆ.
ಕಾಂಪೌಂಡ್ ಒಳಗಡೆ ನಿಲ್ಲಿಸಿದ್ದ ಬೈಕನ್ನು ಪೊಲೀಸರು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆದರೆ ಕಾಂಪೌಂಡ್ ಒಳಗಡೆ ನಿಲ್ಲಿಸಿದ್ದ ಬೈಕ್ ಅನ್ನು ಪೊಲೀಸರು ಏಕೆ ತೆಗೆದುಕೊಂಡು ಹೋದರು ಎಂಬುದಕ್ಕೆ ಮಾತ್ರ ಸ್ಪಷ್ಟೀಕರಣ ಬೇಕಿದೆಯಲ್ಲವೇ ?
ಖಾಸಗಿ ಸುದ್ದಿವಾಹಿನಿಯೊಂದಿಗೆ ಕುರಿತು ವರದಿಯನ್ನೂ ಬಿತ್ತರಿಸಿದೆ.