ಜಯದ ಸಂಕೇತ ಕೊರೇಗಾಂವ ವಿಜಯ ಸ್ತಂಭ

ಪ್ರಸ್ಥಾವನೆ: ಮನುಷ್ಯ ಮನುಷ್ಯನಾಗಿ ಮನುಷ್ಯತ್ವದಿಂದ ಬದುಕಬೇಕಾಗಿದೆ ಆದರೆ ಕ್ರೂರ ಪ್ರಾಣಿಯಂತೆ ವತಿ೯ಸುತ್ತಿರುವುದು ಸಮಾಜಕ್ಕೆ ಕಂಟಕಪ್ರಾಯವಾಗಿದೆ… ಅಂದು ಇಂದು ಮುಂದೆಯೂ ಮಾನವೀಯ ಮೌಲ್ಯಗಳೊಂದಿಗೆ ಸಾಗಿದಾಗ ಮಾತ್ರ ಪ್ರಬುದ್ಧ ಸಮಾಜ ಕಾಣಲು ಸಾಧ್ಯವಾಗುವುದು …ಮಾನವೀಯತೆ ಮರೆತು ಜಾತಿ ಜಾತಿ ಅಂತಾ ಬೇಧ ಭಾವ ಮಾಡುವುದು ಸರಿಯಲ್ಲ ಇಂದು ಶಿಕ್ಷಣ ಪಡೆದು ಎಲ್ಲರೂ ಜ್ಞಾನವಂತರಾಗಿದ್ದಾರೆ ಆದರೆ ಬೇರೂರಿದ ಈ ಅಸಮಾನತೆಯನ್ನು ಬೇರು ಸಹಿತ ಕಿತ್ತು ಹಾಕಬೇಕಿದೆ ಎಲ್ಲರೂ ಸಮಾನರು ಎಂಬ ಮನೋಭಾವ ಮೂಡಬೇಕಿದೆ ಅಂದಾಗ ಮಾತ್ರ ಸ್ವಚ್ಛ ಸಮಾಜ ಸ್ವಚ್ಛ ಬದುಕು ಕಾಣಲು ಸಾಧ್ಯವಾಗದು ಈ ಜಾತಿಯತೆ ಅನ್ನುವುದು ಇದು ಇವತ್ತು ನಿನ್ನೆಯದಲ್ಲ ಅಂದಿನ ಕಾಲದಿಂದಲೂ ಬೆಳೆದು ಬಂದಿದೆ ಆದರೆ ಅಂಬೇಡ್ಕರವರ ಮಿಸಲಾತಿ ಇಂದಾಗಿ ಸ್ವಲ್ಪ ಮಟ್ಟಿಗಾದರೂ ಸುಧಾರಣೆ ಕಾಣಲು ಸಾಧ್ಯವಾಗಿದೆ ….

ವಿವರಣೆ: ಅದಕ್ಕೆಲ್ಲ ಕಾರಣ ಅಂದಿನ ಅನೇಕ ವ್ಯಕ್ತಿಗಳ ಹೋರಾಟದ ಫಲವಾಗಿದೆ… ಅದಕ್ಕೆ ಸಾಕ್ಷಿ ಎನ್ನುವಂತೆ ಕೊರೇಗಾಂವ ಯುದ್ಧ ಕಾರಣ ಎನ್ನಬಹುದು ಏಕೆಂದೆರ ಅಂದು ಪೇಶ್ವೆಯವರ ದಬ್ಬಾಳಿಕೆಯ ಆಡಳಿತ ಮಹರ್ ಜನಾಂಗದವರ ಮೇಲೆ ತುಳಿತದ ಪ್ರಭಾವ ಕಾರಣವಾಗಿದೆ ಎನ್ನಬಹುದು ಶಿಕ್ಷಣ ಇಲ್ಲದೇ ಅಸ್ಪೃಶ್ಯರನ್ನು ತಮಗೆ ಬಂದಂತೆ ದುಡಿಸಿಕೊಳ್ಳುವುದು ಹಿಂಸಿಸುವುದು ಮಹಿಳೆಯರನ್ನು ಉಪಯೋಗಿಸಿಕೊಳ್ಳುವ ಹೀನಕೃತ್ಯವನ್ನು ಮಾಡುತ್ತಿದ್ದರು ಇದರಿಂದ ಮಹರ್ ಜನಾಂಗದವರು ಬೇಸತ್ತಿದ್ದರು ಅದೇ ಸಮಯದಲ್ಲಿ ಒಬ್ಬ ಮಹರ್ ಜಾತಿಯ ಯುವಕ

ಸಿದ್ಧನಾಕ ಮಕಲನಾಕ ಎಂಬುವವನು ಪೇಶ್ವೆ ಹತ್ತಿರ ಹೋಗಿ ವಿನಂತಿಸಿಕೊಂಡನು ಆಗ ಪೇಶ್ವೆಯ 2ನೇ ಬಾಜಿರಾಯನ ಹತ್ತಿರ ಬ್ರಿಟೀಷರು ಹೊರಗಿನವರು ನಾವು ನೀವು ಇಲ್ಲಿಯವರೇ ನಾವು ನಿಮಗೆ ಯುದ್ಧದಲ್ಲಿ ಸಹಾಯ ಮಾಡಿದರೆ ನೀವು ನಮಗೆ ಏನು ನೀಡುವಿರಿ…? ಎಂದು ಪ್ರಶ್ನಿಸಿದನು ಅದಕ್ಕೆ ಬಾಜಿರಾಯ ” ಧಮ೯ಗ್ರಂಥಗಳು ಏನು ಹೇಳುತ್ತವೆಯೋ ಅದರಂತೆ ನಿಮ್ಮನ್ನು ನಡೆಸಿಕೊಳ್ಳುತ್ತೇವೆ ನೀವು ಅಸ್ಪೃಶ್ಯರೆಂಬುದನ್ನ ಮರೆಯಬೇಡಿ ಎಂದನು”…ಆಗ ಕೋಪದಿಂದ ಸಿದ್ಧನಾಕ ಮಕಲನಾಕ ಕೋಪದಿಂದ ಹೋರಹೋದ ….ಆಗಲೇ ಆ ಸ್ಥಳಕ್ಕೆ ಗೋಮೂತ್ರ ಸಿಂಪಡಿಸಿದರು…ಅಲ್ಲಿಂದ ಕೋಪಗೊಂಡ ಬ್ರಿಟಿಷರ ಹತ್ತಿರ ಹೋಗಿ ವಿನಂತಿಸಿ ಕೊಂಡು ತಮ್ಮ ಪರಿಸ್ಥಿತಿ ತಿಳಿಸಿ ನಿಮಗೆ ಸಹಾಯ ಮಾಡಿದರೆ ನೀವು ನಮಗೇನು ನೀಡುವಿರಿ ಎಂದು ಕೇಳಿದನು” ಗೆದ್ಧ ಅಧ೯ರಾಜ್ಯವನ್ನು ಕೊಡುತ್ತೇವೆ ಎಂದು ಹೇಳಿದರು ಆಗ ಸಿದ್ಧನಾಕ ನೀವು ನಮ್ಮ ಜನಾಂಗದವರಿಗೆ ಶಿಕ್ಷಣ ನೀಡಬೇಕೆಂದು ವಿನಂತಿಸಿ ಕೊಂಡನು ಬೋಡಿ೯ಂಗ ಶಾಲೆಗಳನ್ನು ತೆರೆಯಬೇಕು ಅಂತಾ ಕೇಳಿದಾಗ ಬ್ರಿಟಿಷರು ಒಪ್ಪಿಕೊಂಡರು…

ಆಗ ಮಹರ್ ಜನಾಂಗದ ಸೈನಿಕರು ವೀರರು ಯೋಧರು ಆಗಿದ್ದರು ಅಂದು 31ಡಿಸೆಂಬರ್ 1817.. .ರಾತ್ರ 8.30 ರಿಂದ ಶರವೇಗದಲ್ಲಿ ರಾತ್ರ 25 ಮೈಲು
ಕ್ರಮಿಸಿ ಜನವರಿ 1 ರಂದು 1818 ಬೆಳಗಿನ ಸಮಯ 8.30 ಕ್ಕೆ ಕೊರೇಗಾಂವ ತಲುಪಿದರು 24 ತಾಸು ಆಹಾರ ಸೇವಿಸದೆ ವೀರಾ ವೇಶದಿಂದ ಹೋರಾಡಿದರೂ 35 ಸಾವಿರ ಸೈನಿಕರು ಪೇಶ್ವೆಯವರಾದರೆ 500 ಮಹರ್ ಜನಾಂಗದ ಯುವಕರು ವೀರಾವೇಶದಿಂದ ಹೋರಾಡಿ ವಿಜಯವನ್ನು ಸಾಧಿಸಿದರು…..ಈ ರೀತಿ ಯುದ್ಧ ಹಿಂದೆ ಮುಂದೆ ನಡೆಯದ ಭಯಂಕರ ಕದನವಾದರೂ ಜಯವನ್ನು ಸಾಧಿಸಿದರು…..

ಇದರ ಸಂಕೇತವಾಗಿ ಭೀಮಾ ನದಿ ತೀರದಲ್ಲಿ 75 ಅಡಿ ಎತ್ತರದ ಕೊರೇಗಾಂವ ವಿಜಯ ಸ್ತಂಭ ಚಿರಸಾಕ್ಷಿಯಾಗಿ ನಿಂತಿದ್ದು ಅದರ ಜೊತೆಗೆ 175 ಸೈನಿಕರ ಹೆಸರುಗಳನ್ನು ವಿಜಯ ಸ್ತಂಭದ ಉತ್ತರ ಕಡೆಯ ಭಾಗದಲ್ಲಿ ಕೆತ್ತಿದ್ದಾರೆ..

ಉಪಸಂಹಾರ: ಅಬ್ಬಾ ಅವರ ಸಾಹಸ ನಮ್ಮದೊಂದು ಸಲ್ಮಾಂ ಹೇಳಲೇಬೇಕು ಅಂದು ಅವರು ಹೋರಾಡಿ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟ ಕೀತಿ೯ ಆ ಯೋಧ ಮಹರ್ ಯುವಕರಿಗೆ ಸಲ್ಲುತ್ತದೆ ಆದ್ದರಿಂದ ಅಂಬೇಡ್ಕರವರು ತಮ್ಮ ಹೋರಾಟವನ್ನು ಈ ಪೂನಾ ದ ಕೊರೋಗಾಂವ ವಿಜಯ ಸ್ತಂಭದಿಂದ ಪ್ರಾರಂಭಿಸಿದರು …‌ಹಾಗಾಗಿ ಇಂದಿಗೂ ವಿಜಯದ ಸಂಕೇತವಾಗಿ ಅಜರಾಮರವಾಗಿದೆ ಕೊರೇಗಾಂವ್ ವಿಜಯಸ್ತಂಭ 🙏🙏

ಶ್ರೀಮತಿ ದ್ರಾಕ್ಷಾಯಣಿ ಉದಗಟ್ಟಿ
ಶಿಕ್ಷಕಿ ರಾಣೆಬೆನ್ನೂರ

Leave a Reply

Your email address will not be published. Required fields are marked *