ಹರಿಯುವ ನೀರನ್ನು ಕುಡಿಯಲು ನೀಡಿದ – ಅಭಿಯಂತರ ಶಿಲ್ಪಿ

ಒಂದು ವ್ಯವಸ್ಥಿತ ಆಕರ ನಿರ್ಮಾಣ ಮಾಡಲು ಕಾರ್ಮಿಕರು, ಯೋಜನೆ ಬೇಕಾಗುತ್ತದೆ. ಆ ಆಕೃತಿಯ ಮತ್ತು ನಿರ್ಮಾಣದ ಜೀವಾಳವೇ ಅಭಿಯಂತರರಾಗಿದ್ದಾರೆ. ಆದ್ದರಿಂದ ಅಭಿಯಂತರರನ್ನು ನಿರ್ಮಾಣಗಳ ಶಿಲ್ಪಿ ಅಂತಾ ಕರೆಯುತ್ತಾರೆ. ಒಂದು ಕಾಲದಲ್ಲಿ ಭಾರತ ನದಿ ಮರಗಳಿಂದ ಸಂಪತ್ ಬರಿತವಾಗಿತ್ತು. ಆದರೆ ಆಗ ನೀರಿಗಾಗಿ ಬೇಸಿಗೆಯಲ್ಲಿ ಹಾಹಾಕಾರ ಎದ್ದಿದೆ. ಜೀವದ ಜೀವ ಮೂಲವಾದ ನೀರನ್ನು ಹರಿಯದೆ ಬಿಡದೆ. ಕುಡಿಯಲು, ಕೃಷಿಗೆ, ದನಕರುಗಳಿಗೆ, ಮನರಂಜನೆ, ಜಲ ಸಾರಿಗೆ ವಿವಿಧ ಕಾರ್ಯಗಳಿಗೆ ನೀರು ಸಂಗ್ರಹಿಸಲು ಆಣೆಕಟ್ಟು ಕಟ್ಟುತ್ತಾರೆ. ಅಂತಾ ಮಹಾ ಆಣೆಕಟ್ಟುಗಳ ಭಾರತದ ಜನಕ ಹರಿಯುವ ನೀರಿಗೆ ಮೋಕ್ಷ ನೀಡಿದ. ಅವರೆ ವಿಶ್ವ ವಿಖ್ಯಾತ ಇಂಜಿನಿಯರ್, ಮೈಸೂರು ಸಂಸ್ಥಾನದ ದಿವಾನ, ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೊದಲಿಗೆ ಬರುತ್ತಾರೆ. ಇವರು ಭಾರತದಲ್ಲಿ ಕಟ್ಟಿದ ” ಗ್ವಾಲಿಯರ್ ಡಿಗ್ರಾ” ಆಣೆಕಟ್ಟು ಮತ್ತು ಕರ್ನಾಟಕದ ” ಕೃಷ್ಣರಾಜ ಸಾಗರ”  ಅಣೆಕಟ್ಟು ಇವರ ಅತ್ಯದ್ಭುತ ಆಣೆಕಟ್ಟುಗಳಾಗಿವೆ. ಅವುಗಳು ಇಂದಿಗೂ ಜೀವಂತವಾಗಿವೆ. ಆದ್ದರಿಂದ ಅವರ ಶ್ರೇಷ್ಠತೆ ಈಗಲು ಎತ್ತಿಹಿಡಿಯುತ್ತದೆ. 15 ನೇ ಸಪ್ಟೆಂಬರ್ ದಿನವನ್ನು ಭಾರತದ ಇಂಜಿನಿಯರ್ ದಿನ ಅಂತಾ ಸರ್. ಎಂ. ವಿಶ್ವೇಶ್ವರಯ್ಯರ ಜನ್ಮ ದಿನವನ್ನಾಗಿ ಆಚರಿಸುತ್ತಾರೆ.

      ಮೈಸೂರು ಸಂಸ್ಥಾನದ ಮಹಾರಾಜ ಕೃಷ್ಣರಾಜ ಒಡೆಯರು ಅಚ್ಚು ಮೆಚ್ಚಿನ ದಿವಾನರಾಗಿದ್ದರು ಮತ್ತು ಇಂಜಿನಿಯರರಾಗಿದ್ದರು. 1917 ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಈ ಕಾಲೇಜಿಗೆ ಈಗಲು “ಸರ್.ಎಂ. ವಿಶ್ವೇಶ್ವರಯ್ಯ ಕಾಲೇಜ ಆಪ್ ಇಂಜಿನಿಯರಿಂಗ್” ಅಂತಾ ಕರೆಯುತ್ತಾರೆ. ಇಂತಹ ಮಹಾ ನಿರ್ಮಾಣಗಳ ಶಿಲ್ಪಿಯನ್ನು ಭಾರತ ಹೊಂದಿದ್ದರಿಂದ ಭಾರತದ ಇಂಜಿನಿಯರಿಂಗ್ ಕ್ಷೇತ್ರ ವಿಶ್ವ ವಿಖ್ಯಾತವಾಗಿದೆ.

-: ಸರ್.ಎಂ.ವಿ ಜೀವನ :-

       ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಚಿಕ್ಕಬಳ್ಳಾಪೂರ ಜಿಲ್ಲೆಯ ಮುದ್ದೇನಹಳ್ಳಿ ಎಂಬ ಸಣ್ಣ ಕುಗ್ರಾಮದಲ್ಲಿ ಜನಸಿದರು. ಸಾಧಾರಣ ಸವಲತ್ತು ಉತ್ತಮ ರಸ್ತೆ ಸಂಪರ್ಕ, ಮೂಲಭೂತ ಸೌಕರ್ಯವಿಲ್ಲದ ಗ್ರಾಮವಾಗಿತ್ತು. 15 ಸಪ್ಟೆಂಬರ್ 1860 ರಲ್ಲಿ ತಂದೆ ಶ್ರೀನಿವಾಸ ಶಾಸ್ತ್ರಿ ತಾಯಿ ವೆಂಕಟಲಕ್ಷ್ಮಮ್ಮ ಇವರ ಉದರದಲ್ಲಿ ಭಾರತದ ಭಾಗ್ಯದ ಭವಿಷ್ಯದ ಇಂಜಿನಿಯರಿಂಗ್ ಶಿಲ್ಪಿ ಜನಸಿತು. ಇವರ ಹಿರಿಯರು ಆಂದ್ರ ಪ್ರದೇಶದ ಮೋಕ್ಷಗುಂಡಂ ಎಂಬ ಗ್ರಾಮದಿಂದ ಕೆಲಸ ಅರಿಸಿ ಮುದ್ದೇನಹಳ್ಳಿಗೆ ಬಂದು ವಾಸವಾದರು. ಆದ್ದರಿಂದ ಇವರ ಊರಿನ ಪೂರ್ವಿಕರ ಗ್ರಾಮದ ಹೆಸರೆ ಮೋಕ್ಷಗುಂಡಂ ಇವರ ಹೆಸರಲ್ಲಿ ಸೇರಿಕೊಂಡಿದೆ.

       ಶ್ರೀನಿವಾಸ ಶಾಸ್ತ್ರಿಯವರು ಸಂಸ್ಕೃತ ವಿದ್ವಾಂಸರು, ಧರ್ಮ ಶಾಸ್ತ್ರವಂತರು ಮತ್ತು ಆಯುರ್ವೇದ ತಜ್ಞರಾಗಿದ್ದರು. ಇವರ ಗರಡಿಯಲ್ಲಿ ವಿಶ್ವೇಶ್ವರಯ್ಯನವರು ಬೆಳೆದರು. ಇವರ ತಂದೆ ಅಕಾಲಿಕವಾಗಿ 15ನೇ ವಯಸ್ಸಿನಲ್ಲಿ ವಿಶ್ವೇಶ್ವರಯ್ಯರು ಇರುವಾಗಲೇ ತೀರಿಕೊಂಡರು. ಇವರ ತಾಯಿಯ ಮಮತೆಯಲ್ಲಿ ಅಕ್ಕರೆಯಲ್ಲಿ ಬೆಳೆದರು. ಬಡತನದಲ್ಲಿಯೇ ತಮ್ಮ ತವರು ಜಿಲ್ಲೆ ಚಿಕ್ಕಬಳ್ಳಾಪೂರದದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು. 1881 ರಲ್ಲಿ ಬಿ.ಎ ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ  ಮತ್ತು ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪುಣೆಯ ವಿಜ್ಞಾನ ಕಾಲೇಜಿನಲ್ಲಿ ಮುಗಿಸಿದರು. ವಿಶ್ವೇಶ್ವರಯ್ಯನವರು ಬಾಲ್ಯದಲ್ಲಿ ಹೆಚ್ಚು ತೀಕ್ಷ, ಸಂವೇದನಾಶೀಲ, ಸೃಜನಶೀಲ ಬುದ್ಧಿ ಶಕ್ತಿ ಸ್ವಭಾವದವರಾಗಿದ್ದರು.ಅವರ ಆಕರ, ಚಿತ್ರಣ, ಯೋಜನೆ, ನಿರ್ಮಾಣ, ಶೈಲಿ, ಸರಳತೆ, ಕಲೆ, ಇತ್ಯಾದಿ ಜಗತ್ತಿನ ಯಾವುದೇ ಇಂಜಿನಿಯರರಗಿಂತ ಎತ್ತರ ಮಟ್ಟದಲ್ಲಿವೆ.

-: ಆಣೆಕಟ್ಟುಗಳ ಜನಕ :-

        ದೇಶ ಬ್ರಿಟಿಷ್ ಕಪಿಮುಷ್ಠಿಯಲ್ಲಿ ಸಿಕ್ಕು ನಲುಗುತ್ತಿರುವಾಗ ತಿಂದ ಅನ್ನ ಅರಗಿಸಲು ನೀರು ಬೇಕಾಗಿತ್ತು. ನೀರು ಸಂಗ್ರಹಿಸಲು ಮಡಿಕೆ, ಸಣ್ಣ ಕೆರೆ ಬಿಟ್ಟರೆ ಬೇರೆ ಮಾರ್ಗವಿರಲ್ಲಿಲ. ಅವು ಕೆಲವು ದಿನದಲ್ಲಿ ಮುಗಿದುಹೋಗುತ್ತಿದ್ದವು. ನೀರು ಮಳೆಗಾಲದಲ್ಲಿ  ಹರಿದು ಹೋದರೆ ಬೇಸಿಗೆಯಲ್ಲಿ ನಾಡು,ಗಡಿ ದಾಟಿ ನೀರು ತರಬೇಕಿತ್ತು. ಹನಿ ಹನಿ ನೀರು ಅಮೃತವಾಗಿತ್ತು. ಕೃಷಿಕರ ಮತ್ತು ಜಾನುವಾರುಗಳ ಗೋಳು ಗಗನ ಮುಟ್ಟಿತ್ತು. ಅಂತಹ ಸಮಯದಲ್ಲಿ ವಿಶ್ವೇಶ್ವರಯ್ಯನವರು ಮುಂಬಯಿನಲ್ಲಿ 1884 ರಲ್ಲಿ ಲೋಕೋಪಯೊಗಿ ಇಲಾಖೆ, ನಂತರ ಭಾರತೀಯ ನೀರಾವರಿ ಕಮಿಷನರ್ ಆದರು.  ಜನರ ನೀರಿನ ಗೋಳು ಕಣ್ಣಾರೆ ಕಂಡು ಶಾಸ್ವತ ಪರಿಹಾರ ಮಾಡಲು ನೀರು ಹರಿಯುವುದನ್ನು ತಡೆದು ಕುಡಿಯಲು ಜನರಿಗೆ ನೀರು ನೀಡಲು ಶಪತ ಮಾಡಿದರು. ಹಳ್ಳಿ ಹಳ್ಳಿಗಳಲ್ಲಿ ನೀರಿಗೆ ಪಡುವ ಕಷ್ಟ  ನೋಡಿ ಆಣೆಕಟ್ಟುಗಳ ಜನಕವಾದರು.

      ಅರ್ಥರ್ ಕಾಟನ್ ಇವರಿಂದ ಗ್ರಾಂಡ್ ಆಣೆಕಟ್ಟು ನೋಡಿ ಪ್ರಭಾವಿತರಾಗಿ ಈ ಮಾದರಿ ನೀರು ಸಂಗ್ರಹಿಸಿ ಜನರ ಬವಣೆ ನೀಗಿಸಲು ಮೈಸೂರು ಮಹಾರಾಜರಿಗೆ ಸಂಪೂರ್ಣವರದಿ ನೀಡಿದರು. ನೀರು ಸಂಗ್ರಹಿಸಲು ಆಣೆಕಟ್ಟುಗಳಿಗೆ ಉಪಯೋಗವಾಗುವಂತಹ ” ಸ್ವಯಂಚಾಲಿತ ಫ್ಲಾಡ್ ಗೇಟ್” ವಿನ್ಯಾಸವಂದನ್ನು ಶೋಧಿಸಿ ಪೇಟೆಂಟ್ ಪಡೆದರು. 1903 ರಲ್ಲಿ ಪುಣೆಯಲ್ಲಿನ ಖಡಕ್ವಾಸ್ಲಾ ಆಣೆಕಟ್ಟುಗಳಲ್ಲಿ ಫ್ಲಾಡ್ ಗೇಟ್ ಬಳಸಿ ಯಶಸ್ವಿಯಾಗಿ ಫಲಕಂಡುಕೊಂಡರು. ಇದರಿಂದ ಪ್ರಬುದ್ಧರಾದ ಸರ್.ಎಂ.ವಿ ಯವರು ಮುಂದೆ ಗ್ವಾಲಿಯರ್ ಟಿಗ್ರಾ, ಕೃಷ್ಣರಾಜ ಸಾಗರದಲ್ಲಿ ಪ್ರಯೋಗಿಸಿ ಅತ್ಯಾಧುನಿಕ ರೀತಿ ನೀರು ಸಂಗ್ರಹಿಸಿದರು. ಗೇಟ್ ಮತ್ತು ಆಣೆಕಟ್ಟುಗಳಿಗೆ ಯಾವುದೇ ಹಾನಿಯಾಗದ ರೀತಿ ವ್ಯವಸ್ಥಿತವಾಗಿ ನೀರು ಸಂಗ್ರಹಿಸಿ ಶಭಾಷಗಿರಿ ಪಡೆದರು. ಕೃಷ್ಣರಾಜ ಒಡೆಯರು ಈ ಯೋಜನೆಯ ಯಶಸ್ವಿಗೆ ಸರ್.ಎಂ.ವಿ ಮೇಲೆ ಹೆಮ್ಮೆ ಮೂಡಿತು.

      ಈ ಮಹಾ ಮಹತ್ವದ ಸಾಧನೆಗೆ ವಿಶ್ವ ವಿಖ್ಯಾತರಾದರು ಅವರ ಸಾಧನೆ ನಮ್ಮ ಕೃಷ್ಣರಾಜ ಸಾಗರ ಕೈಗನ್ನಡಿಯಾಗಿದೆ. ಲಂಡನ್, ಹೈದರಾಬಾದ್ ಇತ್ಯಾದಿ ಸ್ಥಳಗಳಲ್ಲಿ ವಿಶ್ವೇಶ್ವರಯ್ಯರ ಇಂಜಿನಿಯರಿಂಗ್ ಸಾಕ್ಷಿಯಾಗಿದೆ. ಇವರ ಶ್ರೇಷ್ಠ ಸಾಧನೆಗೆ ಬ್ರಿಟಿಷ್ ಕಂಪನಿ ಸರಕಾರ ” ಸರ್” ಪದವಿ ಬಿರುದು ನೀಡಿತು. 1955 ರಲ್ಲಿ ಭಾರತ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಈ ಪ್ರಶಸ್ತಿ ಪಡೆದ ಮೊದಲ ಇಂಜಿನಿಯರ್ ಮತ್ತು ಕನ್ನಡ ಮೊದಲ ಪುತ್ರರಾಗಿದ್ದಾರೆ.

      ಇವರ ಹೆಸರಲ್ಲಿ ದೇಶ, ವಿದೇಶ, ರಾಜ್ಯಗಳಲ್ಲಿ ಅನೇಕ ಇಂಜಿನಿಯರಿಂಗ್ ಕಾಲೇಜುಗಳು, ವಿಶ್ವವಿದ್ಯಾಲಯಗಳಿಗೆ ವಿಶ್ವೇಶ್ವರಯ್ಯನವರ ಹೆಸರು ಇಡಲಾಗಿದೆ.

      ಈ ಭಾರತದ ಹೆಮ್ಮೆಯ ಸುಪುತ್ರನ ಇಂಜಿನಿಯರಿಂಗ್ ವಿಶ್ವದಲ್ಲಿ ಬಾರಿ ಬೇಡಿಕೆ ಆ ಕಾಲದಲ್ಲಿತ್ತು. ಆದರೆ ಅವರು ಈ ಭಾರತ ದೇಶಕ್ಕಾಗಿ ತಮ್ಮ ಜ್ಞಾನ, ತಂತ್ರ, ಕೌಶಲ್ಯ ಬಳಸಿ ದೇಶದ ಜನರ ನೀರಿನ ದಾಹ ನೀಗಿಸಿದ ಜಲ ಮಹಾತ್ಮರಾಗಿದ್ದಾರೆ. ಇವರು 12-4-1962 ರಲ್ಲಿ ತಮ್ಮ 101 ನೇ ಇಳಿ ವಯಸ್ಸಿನಲ್ಲಿ ನಿಧನರಾದರು. ಇವರ ಆಣೆಕಟ್ಟುಗಳು ಇಗಲು ಕಾರ್ಯನಿರ್ವಹಿಸುತ್ತಿವೆ. ವಿಶ್ವೇಶ್ವರಯ್ಯನವರನ್ನು ಈ ಆಣೆಕಟ್ಟು ನೋಡದಾಗ ಮತ್ತೆ ಮತ್ತೆ ನೆನಪಿಸುತ್ತಿವೇ.

ಲೇಖಕರು :- ಶರೀಫ ಗಂಗಪ್ಪ ಚಿಗಳ್ಳಿ

Leave a Reply

Your email address will not be published. Required fields are marked *