ಸಿಡಿದೆದ್ದ ರಾಕಿಂಗ್ ಸ್ಟಾರ್:ನಮ್ಮ ತಂಟೆಗೆ ಬಂದ್ರೆ ಪರಿಣಾಮ ನೆಟ್ಟಗಿರೋಲ್ಲ
ಪದೇ ಪದೇ ಹೀಗೆ ನನ್ನನ್ನು ಕೆಣಕುತ್ತಿದ್ದರೆ ಪರಿಸ್ಥಿತಿ ನೆಟ್ಟಗೆ ಇರೋಲ್ಲ ಎಂದು ನಟ ಯಶ್ ಈಗ ಕಿಡಿಕಾರಿದ್ದಾರೆ. ಈ ವರೆಗೂ ತಮ್ಮ ವಿರುದ್ದದ ಟೀಕೆಗಳಿಗೆ ಕೊಂಚವೂ ತಾಳ್ಮೆ ಕಳೆದುಕೊಳ್ಳದೆ ಉತ್ತರಿಸುತ್ತಿದ್ದ ಅವರು ಈಗ ಜಬರ್ದಸ್ತಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಬೆಳೆಯುವ ಸಂದರ್ಭದಲ್ಲಿ ನನ್ನ ಬೆನ್ನಿಗೆ ನಿಂತು ಆಶೀರ್ವಾದ ಮಾಡಿದ್ದು ಅಂಬರೀಷ್.ಈಗ ಸುಮಲತಾ ಅಕ್ಕನ ಪರ ನಾನು ಪ್ರಚಾರಕ್ಕೆ ಇಳಿದಿದ್ದೇನೆ.ಅವರಿಗಾಗಿ ಎನುಬೇಕಾದರು ಮಾಡುತ್ತೇನೆ ಇಂದು ಯಶ್ ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು “ಮನೆ ಬಾಡಿಗೆ ಕಟ್ಟಲಾಗದ ನಟ”ಎಂದು ಟೀಕಿಸಿದ್ದಕ್ಕೆ ಯಶ್ ಸಖತ್ತಾಗಿಯೇ ಟಾಂಗ್ ಕೊಟ್ಟಿದ್ದಾರೆ.”ಹೌದು,ಕೆಲ ಕೆರೆಗಳ ಹೂಳು ತೆಗೆಸಲು ನಾನು ಹಣ ಹಾಕಿದ್ದೆ.ಗೆದ್ದು ಅಧಿಕಾರ ಹಿಡಿದವರು ನಿಯತ್ತಾಗಿ ಇಂಥ ಕೆಲಸ ಮಾಡಿಸಿದ್ರೆ ನಮ್ಮಂಥ ಕೆಲವರು ಯಾಕೆ ಇಂಥ ಕೆಲಸಕ್ಕೆ ಮುಂದಾಗುತ್ತಿದ್ದೆವು? ಬರೀ ತಿಂದು ತೇಗೋರೆ ಅಧಿಕಾರದಲ್ಲಿ ಕೂತಿದ್ದಾರೆ”ಎಂದು ಯಶ್ ನೇರವಾಗಿ ಸಮ್ಮಿಶ್ರ ಸರ್ಕಾರದ ಬುಡಕ್ಕೇ ಕ್ಯೆ ಹಾಕಿ ಟೀಕಿಸಿದ್ದಾರೆ.
ಅಂಬರೀಷ್ ಇದ್ದಿದ್ದರೆ ಇವರಾರು ಹಿಂಗೆ ಮಾತನಾಡುತ್ತಿರಲಿಲ್ಲ ಎಂಬ ಸತ್ಯ ಮಂಡ್ಯದ ಜನರಿಗೆ ಗೊತ್ತಿದೆ.ಅಂಬರೀಷ್ ಅವರ ಪತ್ನಿ ಚುನಾವಣೆಗೆ ಸ್ಪರ್ಧೆ ಮಾಡದಿದ್ದರೆ ಮಾತ್ರ ಒಳ್ಳೆಯವರಾ ಇವರ ದೃಷ್ಟಿಯಲ್ಲಿ ಎಂದು ಕೆಣಕಿದ ರಾಕಿಂಗ್ ಸ್ಟಾರ್ ಇಷ್ಟಕ್ಕೇ ಬಿಟ್ಟಿಲ್ಲ.
“ಸುಮ್ನೆ ನಿಮ್ಮ ಪಾಡಿಗೆ ನೀವು ಪ್ರಚಾರ ಮಾಡ್ತಾ ಹೋದ್ರೆ ಸರಿ.ಅದು ಬಿಟ್ಟು ಪದೇ ಪದೇ ನನ್ನ,ದರ್ಶನ್ ಅವರನ್ನಾ ಅಥವಾ ಸುಮಕ್ಕ ಅವರನ್ನು ಕೆಣಕಿದರೆ ನಾನು ಫುಲ್ ಆಳಕ್ಕೆ ಇಳಿಬೇಕಾಗುತ್ತೆ.ಇನ್ನು ವಯಸ್ಸಿದೆ, ಶಕ್ತಿ ಇದೆ.ಸಮಾನ ಮನಸ್ಕ ಅಭಿಮಾನಿಗಳು ಇದ್ದಾರೆ. ಏನು ಮಾಡಬೇಕು ಎಂಬುದೂ ಗೊತ್ತಿದೆ”ಎಂದು ಅವರು ವಾರ್ನಿಂಗ್ ನೀಡಿದ್ದಾರೆ.
ಚುನಾವಣೆ ಎಂದಮೇಲೆ ಅದು ಅಖಾಡ. ಅಲ್ಲಿ ತೋರಿಸಿ ನಿಮ್ಮ ಶಕ್ತಿ.ಅಡುಬಿಟ್ಟು ಸುಮಲತಾ ಅಕ್ಕ ಅಥವಾ ಇನ್ಯಾರನ್ನೋ ಕೆಣಕಿ ಬಾಯಿಗೆ ಬಂದಂತೆ ಮಾತಾಡಿದರೆ ಪರಿಣಾಮ ನೆಟ್ಟಾಗಿರೋಲ್ಲ ಎಂದು ಯಶ್ ಗುಡುಗಿದ್ದಾರೆ.