ನಿಮಗಾಗಿ ನಾವು ನಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವಾಗ ನೀವು ಇಷ್ಟು ಮಾಡಬಾರದೇಕೆ??

ನಮ್ಮ ಭಾರತದ ಸೈನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರತದ ಗಡಿಯಲ್ಲಿ 1ನಿಮಿಷ 8 ಸೆಕೆಂಡುಗಳ ವಿಡಿಯೋ ತುಣುಕೊಂದನು ಹರಿಬಿಟ್ಟಿದ್ದಾರೆ.

ಭಾರತಕ್ಕೆ ಶತ್ರುವಾಗಿ ಕಾಡುತ್ತಿರುವ ಚೀನಾ ವಿರುದ್ಧ ಲಡಾಖ್ ಗಡಿಯಲ್ಲಿ ಅವರು ಮಾತನಾಡಿರುವ ಈ ವಿಡಿಯೋದಲ್ಲಿ ಅತ್ಯಂತ ಶಾಂತಚಿತ್ತರಾಗಿಯೇ ನಮ್ಮ ವೀರಯೋಧ ಮಾತನಾಡಿದ್ದು, ಭಾರತೀಯರು ಚೀನಾದ ವಿರುದ್ಧ ಹೇಗೆ ಹೋರಾಡಬಹುದು ಎಂಬುದನ್ನು ಕರೆ ನೀಡಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆತ್ಮೀಯರೇ ನಾವು ವಿಡಿಯೋ ನೋಡಿ ಸುಮ್ಮನಾದರೆ ಅದರಿಂದೇನು ಪ್ರಯೋಜನ? ಈಗಾಗಲೇ ಪಾಪಿ ಚೀನಾ ಭಾರತವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕರೋನ ಸೋಂಕಿಗೆ ಕಾರಣವಾಗಿದೆ ಇದೇನು ಗುಟ್ಟಿನ ವಿಷಯವಲ್ಲ. ಕರೊನಾದಿಂದ ಸಾವಿರಾರು ಜನ ಮೃತಪಟ್ಟರೆ, ಸೋಂಕಿತರ ಸಂಖ್ಯೆ ಲಕ್ಷಗಳ ಸಂಖ್ಯೆಯಲ್ಲಿವೆ. ಇಂತಹ ಸ್ಥಿತಿಯನ್ನು ಎದುರಿಸುವ ಸವಾಲು ಇರುವ ಸ್ಥಿತಿಯಲ್ಲೇ ಚೀನಾ ಗಡಿಭಾಗದಲ್ಲಿ ಭಾರತವನ್ನು ಕೆಣಕುತ್ತಿದೆ.

ನಮ್ಮ ನಿಶ್ಶಸ್ತ್ರರಾಗಿದ್ದ ವೀರ ಸೇನಾನಿಗಳನ್ನು ಕುಹಕದಿಂದ ಕೊಂದು ಹಾಕಿದೆ. ಪರಿಸ್ಥಿತಿ ಹೀಗಿರುವಾಗ ನಮ್ಮ ವೀರ ಯೋಧರು ತಕ್ಕ ಶಾಸ್ತಿಗೆ ಸಮಯ ಕಾಯುತ್ತಿದ್ದಾರೆ. ಯೋಧರಾಗಿ ನಾವು ಏನು ಮಾಡುತ್ತಿದ್ದೇವೆ ಮತ್ತು ಭಾರತೀಯ ನಾಗರಿಕರಾಗಿ ನೀವುಗಳು ಹೇಗೆ ಚೀನಾವನ್ನು ಸದೆ ಬಡಿಯಬಹುದು ಎಂಬುದನ್ನು ನಮ್ಮ ಯೋಧ ಕೆಲವಾರು ಸೆಕೆಂಡುಗಳ ವಿಡಿಯೋ ತುಣುಕಿನಲ್ಲಿ ವಿವರಿಸಿದ್ದಾರೆ. ನೀವುಗಳು ನಮ್ಮ ಹಾಗೆ ಗನ್ ಹಿಡಿದು ಗಡಿಗೆ ಬಂದು ಸೆಣೆಸುವ ಅಗತ್ಯವಿಲ್ಲ. ಅದಕ್ಕಾಗಿ ನಾವಿದ್ದೇವೆ. ನಮ್ಮ ದೇಶ ಕಾಯಲು ಪ್ರಾಣ ತ್ಯಾಗಕ್ಕೂ ಸಿದ್ಧರಿದ್ದೇವೆ. ಆದರೆ ನೀವು ಇಷ್ಟನ್ನು ಮಾಡಿ ಎಂಬುದನ್ನು ವಿಡಿಯೊದಲ್ಲಿ ವಿವರಿಸಿದ್ದಾರೆ. ಪ್ರತಿ ಭಾರತೀಯ ಪ್ರಜೆಯೂ ಒಮ್ಮೆ ಇದನ್ನು ನೋಡಲೇಬೇಕು. ನಾವು ಮನೆಯಲ್ಲೇ ಕೂತು ಚೀನಾವನ್ನು ಆರ್ಥಿಕವಾಗಿ ಸದೆ ಬಡಿಯಬಹುದು.

ನಾವೆಲ್ಲರೂ ಮೊದಲು ಸ್ವದೇಶಿ ವಸ್ತುಗಳನ್ನು ಖರೀದಿಸಬೇಕು. ನರಿ ಬುದ್ಧಿಯ ಚೀನಾ ತಯಾರಿಸುತ್ತಿರುವ ಅಗ್ಗದ ವಸ್ತುಗಳ ಬಳಕೆಯನ್ನು ಈ ಕ್ಷಣವೇ ನಿಲ್ಲಿಸಬೇಕು. ಮೊಬೈಲ್ನಿಂದ ಹಿಡಿದು ಎಲ್ಲಾ ಬಗೆಯ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ವಸ್ತುಗಳನ್ನು ಚೀನಾ ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. ಇಷ್ಟಕ್ಕೂ ಚೀನಾದ ಆರ್ಥಿಕ ಸ್ಥಿತಿ ನಿಂತಿರುವುದು ಅಲ್ಲಿಯ ಮಾರುಕಟ್ಟೆಯಿಂದಲ್ಲ,ನೆರೆ ರಾಷ್ಟ್ರಗಳ ಬೇಡಿಕೆಯಿಂದ. ಕುತಂತ್ರಿ ಚೀನಾ ಅಷ್ಟೊಂದು ಬುದ್ಧಿವಂತಿಕೆ ತೋರುತ್ತಿರುವಾಗ ನಾವೇಕೆ ಸುಮ್ಮನಿರಬೇಕು. ಒಮ್ಮೆ ಈ ವಿಡಿಯೋ ನೋಡಿ. ನಂತರ ನೀವು ನಿರ್ಧರಿಸಿ ಅದಕ್ಕಾಗಿ ಎಪ್ಪತ್ತು ಸೆಕೆಂಡ್ ಗಳ ಕಾಲ ಸಮಯ ನೀಡುವಿರಿ ತಾನೇ.
ಜನ ಮಿಡಿತ ಎಂದು ಫೇಸ್ ಬುಕ್ ನಲ್ಲಿ ಟೈಪ್ ಮಾಡಿ ಈ ವಿಡಿಯೋ ವೀಕ್ಷಿಸಿ ತಮಗೆ ಸಮ್ಮತಿ ಇದ್ದರೆ ಶೇರ್ ಮಾಡಿ ಹಾಗೂ ಮೆಚ್ಚುಗೆ ಸೂಚಿಸಿ ನಮ್ಮ ವೀರ ಸೇನಾನಿಗಳನ್ನು ಗೌರವಿಸಿ.

-ಸುನಿತಾಪ್ರಕಾಶ್

One thought on “ನಿಮಗಾಗಿ ನಾವು ನಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವಾಗ ನೀವು ಇಷ್ಟು ಮಾಡಬಾರದೇಕೆ??

  • June 30, 2020 at 4:58 am
    Permalink

    ದೇಶಾಭಿಮಾನ ಇದೆ ಎಂದರೆ ಸಾಲದು. ಅದನ್ನು ಪಾಲಿಸಬೇಕು. ಅದು ಯಾವ ರೀತಿ ಪಾಲನೆ ಆದರೂ ಸರಿಯೇ..ಈಗ ಆ ಅವಕಾಶ ಬಂದಿದೆ. ದೇಶಭಕ್ತ ರಾದ ಸೈನಿಕ ನಮ್ಮ ಸಹೋದರ ಇದ್ದಂತೆ. ಅವರ ಮಾತಿಗೆ ಗೌರವ ಕೊಡೋಣ. ಜೈ ಭಾರತ ಮಾತೆ

    Reply

Leave a Reply

Your email address will not be published. Required fields are marked *