ಕಿಂಗ್ಸ್ ಇಲೆವೆನ್ ತಂಡದಿಂದ ಪುಲ್ವಾಮಾ ಹುತಾತ್ಮರ ಕುಟುಂಬಗಳಿಗೆ ತಲಾ ಐದು ಲಕ್ಷ ಪರಿಹಾರ
ಐಪಿಎಲ್ ಕೇವಲ ಫ್ರಾಂಚೈಸಿಗಳಿಗೆ ಹಣ ಮಾಡಿಕೊಡುವ ಉದ್ದೇಶ ಹೊಂದಿರಬಾರದು .ಅದರ ಪ್ರಮುಖ ಮಹತ್ವ ವೆಂದರೆ ಉದಯೋನ್ಮುಖ ಆಟಗಾರರ ಶೋಧ. ಆದರೀಗ ಕಿಂಗ್ಸ್ ಇಲೆವೆನ್ ಪಂಜಾಬ್ ಒಂದು ಹೆಜ್ಜೆ ಮುಂದೆ ಹೋಗಿ ಇತರೆ ಫ್ರಾಂಚೈಸಿಗಳಿಗೂ ಮಾದರಿಯಾಗುವಂತೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ನಮ್ಮ ಯೋಧರ ಕುಟುಂಬಗಳಿಗೆ ಒಂದಿಷ್ಟು ನೆರವಿನ ಹಸ್ತಚಾಚಿದೆ .
ಹೌದು ಈ ಕೆಳಗಿನ ಸುದ್ದಿ ನೋಡಿ .
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಐವರು ವೀರಯೋಧರ ಕುಟುಂಬಗಳಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಯಿತು.
ಪಾಕಿಸ್ತಾನದ ವಿದ್ವಾಂಶಕ ದಾಳಿಯಲ್ಲಿ ಪಂಜಾಬ್ ಹಾಗು ಹಿಮಾಚಲ ಪ್ರದೇಶದ ಯೋಧರು ಕೂಡ ಹುತಾತ್ಮರಾಗಿದ್ದು ಅವರ ಕುಟುಂಬದವರಿಗೆ ನೆರವಾಗುವ ದೃಷ್ಟಿಯಿಂದ ಈ ಪರಿಹಾರವನ್ನು ನೀಡಲಾಗಿದೆ.
ಹುತಾತ್ಮ ಯೋಧರ ಕುಟುಂಬದ ಜೈ ಮಾಲ್ ಸಿಂಗ್, ಸುಖ್ ಜಿಂದರ್ ಸಿಂಗ್, ಮನಿಂದರ್ ಸಿಂಗ್, ಕುಲವಿಂದರ್ ಸಿಂಗ್, ಹಾಗು ತಿಲಕ್ ರಾಜ್ ಅವರಿಗೆ ಕಿಂಗ್ಸ್ ಇಲೆವೆನ್ ತಂಡದ ವತಿಯಿಂದ ತಲಾ 1ಲಕ್ಷ ರೂ. ಪರಿಹಾರ ಚೆಕ್ ಗಳನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಕಿಂಗ್ಸ್ ಇಲೆವೆನ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್, ಸಿ ಆರ್ ಎಫ್ ನ ಡಿ ಐ ಜಿ ವಿ. ಕೆ. ಕುಂದಲ್ ಉಪಸ್ಥಿತರಿದ್ದರು.