ಕಾವ್ಯಮಿಡಿತ: ವಾರದ ಕವಿತೆ | ಮೋದಿಜಿ ನಿಮಗೆ ನನ್ನದೊಂದು ಸಲಾಂ | ಶ್ರೀಮತಿ ಸುನಿತಾಪ್ರಕಾಶ್

ಜನಮಿಡಿತ ಪತ್ರಿಕೆಯು ಹೊಸದಾದ ಅಂಕಣವೊಂದನ್ನು ಆರಂಭಿಸಿದ್ದು ಸ್ಪರ್ಧೆಯಲ್ಲಿ ವಿಜೇತ ಕವಿತೆಗಳಲ್ಲಿ ಒಂದು ಕವಿತೆಯನ್ನ ವಾರದ ಕವಿತೆಯಾಗಿ ಆಯ್ಕೆ ಮಾಡಿ ಈ ಅಂಕಣದಲ್ಲಿ ಪ್ರಕಟಿಸಲು ನಿರ್ಧರಿಸಿದೆ.


ಈ ವಾರದ ವಿಜೇತ ಕವಿತೆ –  ಮೋದಿಜಿ ನಿಮಗೆ ನನ್ನದೊಂದು ಸಲಾಂ

ಜನರ ಮನದಲಿ ನೆಲೆಸಿಹ
ದೈವಸಂಭೂತನಿವನು
ಭಾರತವನುದ್ಧರಿಸಲು
ಅವತರಿಸಿದ ಬುದ್ಧನಿವನು

ಕೋಟಿ ಕೋಟಿ ವಿದ್ಯಾರ್ಥಿಗಳ
ನೆಚ್ಚಿನ ನಾಯಕನಿವನು
ನಡುರಾತ್ರಿ ನೋಟ್ ಬ್ಯಾನ್ ಮಾಡಿ
ಕಪ್ಪುಹಣ ಹೊಂದಿದವರ
ನಿದ್ದೆ ಗೆಡಿಸಿದವನು

ಪ್ರತಿಯೊಬ್ಬರು ಕೇಳದಿದ್ದರು
ಮನೆಯವರ ಮಾತನ್ನ
ಕೇಳಲು ಹಾತೊರೆಯುವರು
ಮೋದಿಜಿಯ ಮನ್ ಕಿ ಬಾತ್ ಅನ್ನ

ಬಡವನ ಬವಣೆಯ ಆಲಿಸಲು
ಧರೆಗಿಳಿದಿಹ ಜಾದುಗಾರನಿವನು
ಶತ್ರುಗಳ ನಿದ್ರಾಹರಣ ಮಾಡದೆ
ಪ್ರತಿಕಾರವೆಸಗಿದ ಶಾಂತಿಧೂತನಿವನು

ಬಯಲು ಶೌಚಾಲಯವನು
ತೊಲಗಿಸಿದ ಬಂಧು ಇವನು
ಸ್ವಚ್ ಭಾರತ್ ಅಭಿಯಾನವ
ಜಾರಿಗೊಳಿಸಿದ ಕರ್ತೃಯಿವನು

ಯುವಶಕ್ತಿಯ ದೃಷ್ಟಿಯನು
ದಿಗಂತದೆಡೆ ಹರಿಸಿದ ಚಂದಿರನಿವನು
ಈಶನಾಜ್ಞೆಯಂತೆ ದೇಶಸೇವೆಗೆಂದು
ಜನ್ಮತಾಳಿರುವ ದಿಟ್ಟ ಸಂಚಾಲಕನಿವನು

ವಿಶ್ವವೆ ತಿರುಗಿ ನೋಡುವಂತೆ ಮಾಡಿದ
ಗಂಭೀರ ವ್ಯಕ್ತಿತ್ವದ ಮಾಂತ್ರಿಕನಿವನು
ಚಾಯ್ ವಾಲನಾಗಿ ಗುರುತಿಸಿಕೊಂಡ
ಚಾಣಾಕ್ಯ ಚಂದಾದಾರನಿವನು

ದುಷ್ಟರಿಂದ ದೇಶವ ರಕ್ಷಿಸಲು ನಿಂತ
ಅಸಾಮಾನ್ಯ ಚೌಕಿದಾರನಿವನು
ಕನ್ನಡ ಕಲಿಯಲಾಗಲಿಲ್ಲವೆಂದು
ಕ್ಷಮೆಕೋರಿದ ಮೊದಲ ನಾಯಕನಿವನು

ರಚನೆ -ಶ್ರೀಮತಿ ಸುನಿತಾಪ್ರಕಾಶ್


ಕವನ ಮತ್ತು ಲೇಖನಗಳಿಗೆ ಆಹ್ವಾನ

ಪ್ರತಿ ಮಂಗಳವಾರ ಜನಮಿಡಿತ ದಿನಪತ್ರಿಕೆ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಪುಟ ಕಾವ್ಯಮಿಡಿತ ಪ್ರಕತಿಸುತಲಿದ್ದು, ಆಸಕ್ತರು ತಮ್ಮ ಕವನಗಳನ್ನು ಹಾಗೂ ಲೇಖನಗಳನ್ನು ನಮ್ಮ Facebook page Janamiditha ಕ್ಕೆ ಅಥವಾ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಬಹುದು.
Mail: janamiditha@gmail.com

One thought on “ಕಾವ್ಯಮಿಡಿತ: ವಾರದ ಕವಿತೆ | ಮೋದಿಜಿ ನಿಮಗೆ ನನ್ನದೊಂದು ಸಲಾಂ | ಶ್ರೀಮತಿ ಸುನಿತಾಪ್ರಕಾಶ್

  • April 7, 2019 at 4:41 am
    Permalink

    ಚೆನ್ನಾಗಿದೆ ಮೋದಿಜಿ ಬಗ್ಗೆ ಬರೆದ ಕವನ

    Reply

Leave a Reply

Your email address will not be published. Required fields are marked *